ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಟು ಹಂಚಿಕೆಯ ಚರ್ಚೆ ಮಾಡಲಿದ್ದೇವೆ; ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

Last Updated 17 ಫೆಬ್ರುವರಿ 2019, 11:21 IST
ಅಕ್ಷರ ಗಾತ್ರ

ಬೆಂಗಳೂರು:ನಾಳೆ ನಡೆಯಲಿರುವ ಚುನಾವಣಾ ಸಮಿತಿ ಸಭೆಯಲ್ಲಿ ಲೋಕಸಭೆ ಚುನಾವಣೆ ಸೀಟು ಹಂಚಿಕೆ‌ ವಿಚಾರದ ಕುರಿತು ಚರ್ಚೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಹಾಗೂ ಕ್ಷೇತ್ರ ಆಯ್ಕೆ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.

ಸೋಮವಾರ ಬಿಬಿಎಂಪಿ‌ ಬಜೆಟ್ ಮಂಡನೆಯಾಗಲಿದೆ.‌ ಕಳೆದ ವರ್ಷದ ಯೋಜ‌ನೆಗಳ ಕೆಲಸ ಶುರುವಾಗಿವೆ. ಯೋಜನೆಗಳು ಮುಗಿದ ಮೇಲೆ ಹಣದ ವೆಚ್ಚದ ಚಿತ್ರಣ ಗೊತ್ತಾಗಲಿದೆ. ಈ ವರ್ಷಕ್ಕೆ 8015 ಕೋಟಿ ರೂ ಕ್ರಿಯಾಯೋಜನೆ ಕೊಟ್ಟಿದ್ದೇವೆ.ವೈಟ್ ಟ್ಯಾಪಿಂಗ್, ಚರಂಡಿ ಅಭಿವೃದ್ಧಿ ಕೆಲಸ, ಫ್ಲೈಓವರ್, ಅಂಡರ್ ಪಾಸ್ ಗಳಂಥ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ಕೊಡಲಿದ್ದೇವೆ ಎಂದರು.

ಫೆ. 19 ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವರಾಜ್ಯ ಬಂದ್‌ನಿಂದ ಸಾಕಷ್ಟು ನಷ್ಟವಾಗಲಿದೆ. ಬಂದ್‌ನಿಂದ‌ ಕೇವಲ ಜನರ ಗಮನ ಸೆಳೆಯಬಹುದಷ್ಟೆ. ಆದರೆ ಉದ್ದೇಶ ಈಡೇರುವುದಿಲ್ಲ.‌ಆದಷ್ಟು ಬಂದ್‌ ಹಿಂದೆಗೆದುಕೊಳ್ಳುವುದು ಸೂಕ್ತ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT