ವಾಹನ ಹಾದುಹೋಗುವ ಮಾರ್ಗವನ್ನು ಪರಿಶೀಲಿಸಲು, ನಕ್ಷೆಯಲ್ಲಿ ವಾಹನದ ಸ್ಥಳವನ್ನು ಗುರುತಿಸಲು ವಿಎಲ್‌ಟಿ ನೆರವಾಗಲಿದೆ. ಅನಧಿಕೃತ ಮಾರ್ಗದಲ್ಲಿ ಚಲಿಸಿದರೂ ಪತ್ತೆ ಹಚ್ಚಬಹುದು. ಅಪಘಾತದ ಸ್ಥಳ, ವೇಗದ ವಿವರ ಎಲ್ಲವೂ ಸುಲಭದಲ್ಲಿ ಲಭ್ಯವಾಗುತ್ತದೆ. ಸೇವಾ ವಾಹನಗಳಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ಇತರ ಪ್ರಯಾಣಿಕರಿಗೆ ತೊಂದರೆಯಾದರೆ ಪ್ಯಾನಿಕ್ ಬಟನ್ ಒತ್ತಿದರೆ ಅದರ ಸಂಕೇತವು ಇಲಾಖೆಯ ನಿಯಂತ್ರಣ ಕೊಠಡಿಗೆ ರವಾನೆಯಾಗುವುದರಿಂದ ಕ್ರಮ ಕೈಗೊಳ್ಳಲು ಸುಲಭವಾಗುತ್ತದೆ. ಈ ಕಾರಣಗಳಿಂದ ವಿಎಲ್‌ಟಿ, ಪ್ಯಾನಿಕ್ ಬಟನ್‌ಗಳನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಎ.ಎಂ. ಯೋಗೀಶ್ ಮಾಹಿತಿ ನೀಡಿದ್ದಾರೆ.