ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಕಳವು: ಮೂವರ ಬಂಧನ

Last Updated 26 ಜನವರಿ 2022, 16:52 IST
ಅಕ್ಷರ ಗಾತ್ರ

ಬೆಂಗಳೂರು: ಒಬ್ಬಂಟಿಯಾಗಿ ಸಾಗುವ ಪಾದಚಾರಿಗಳನ್ನು ಮಾರಕಾಸ್ತ್ರಗಳಿಂದ ಬೆದರಿಸಿ ನಗದು ಹಾಗೂ ಮೊಬೈಲ್‌ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ರಾಘವೇಂದ್ರ ಯಾನೆ ರಾಘು (19), ಆರ್‌.ಭಾನುಪ್ರಕಾಶ್‌ (20) ಹಾಗೂ ಯಾಸೀಂ ಖಾನ್‌ (19) ಬಂಧಿತರು. ಮೂವರು ಬಾಲಕರೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇವರಿಂದ ವಿವಿಧ ಕಂಪನಿಯ 23 ಬೈಕ್‌ ಹಾಗೂ ಸ್ಕೂಟರ್‌, 1 ಆಟೊ, 1 ಕೆಟಿಎಂ ಡ್ಯೂಕ್ ಬೈಕ್‌ ಹಾಗೂ 12 ಮೊಬೈಲ್‌ ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ₹37.5 ಲಕ್ಷ ಎಂದು ಅಂದಾಜಿಸಲಾಗಿದೆ’ ಎಂದು‍ಪೊಲೀಸರು ತಿಳಿಸಿದ್ದಾರೆ.

‘ಕೆಲ ದಿನಗಳ ಹಿಂದೆ ಆರು ಮಂದಿ ದುಷ್ಕರ್ಮಿಗಳು ಒಟ್ಟು ಮೂರು ಬೈಕ್‌ನಲ್ಲಿ ನಗರದ ವಿವಿಧೆಡೆ ಸುತ್ತಾಡಿ, ಒಂಟಿಯಾಗಿ ಹೋಗುವ ನಾಗರಿಕರನ್ನು ಅಡ್ಡಗಟ್ಟಿ ಅವರಿಂದ ನಗದು ಹಾಗೂ ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಪುಟ್ಟೇನಹಳ್ಳಿ ಹಾಗೂ ಜೆ.ಪಿ.ನಗರ ಠಾಣಾ ವ್ಯಾಪ್ತಿಗಳಲ್ಲೂ ಕಳವು ನಡೆದಿತ್ತು. ಈ ಕುರಿತು ತನಿಖೆ ನಡೆಸಲಾಗುತ್ತಿತ್ತು. ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕಳವು ಮಾಡಿರುವುದನ್ನು ವಿಚಾರಣೆ ವೇಳೆ ಅವರು ಒಪ್ಪಿಕೊಂಡಿದ್ದಾರೆ. ವೀಲಿಂಗ್‌ ಮಾಡುವುದಕ್ಕೆ ಬೈಕ್‌ಗಳನ್ನು ಕದಿಯುತ್ತಿದ್ದುದಾಗಿಯೂ ಆರೋಪಿಗಳು ತಿಳಿಸಿದ್ದಾರೆ. ಕದ್ದ ಮೊಬೈಲ್‌ಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂಬುದೂ ಗೊತ್ತಾಗಿದೆ’ ಎಂದು ಹೇಳಿದ್ದಾರೆ.

‘ಆರೋಪಿಗಳ ಬಂಧನದಿಂದ ಜೆ.ಪಿ.ನಗರ ಠಾಣೆಯ 4, ಎಸ್‌.ಜೆ.ಪಾಳ್ಯ, ಜಯನಗರ, ಮಡಿವಾಳ ಠಾಣೆಗಳ ತಲಾ ಎರಡು, ಕುಮಾರಸ್ವಾಮಿ ಲೇಔಟ್‌, ಬಸವನಗುಡಿ, ಕೋರಮಂಗಲ, ವಿವೇಕನಗರ, ಕಮರ್ಷಿಯಲ್‌ ಸ್ಟ್ರೀಟ್‌, ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ), ಹಲಸೂರು, ರಾಜರಾಜೇಶ್ವರಿ ನಗರ, ಹೆಬ್ಬಾಳ, ಹನುಮಂತನಗರ, ಬಾಣಸವಾಡಿ, ಬೇಗೂರು ಹಾಗೂ ತಿಲಕನಗರ ಠಾಣೆ ವ್ಯಾಪ್ತಿಯ ತಲಾ ಒಂದು ಕಳವು ಪ್ರಕರಣಗಳು ಪತ್ತೆಯಾಗಿವೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT