ಶನಿವಾರ, ಜನವರಿ 25, 2020
19 °C
ಪೋಕ್ಸೊ; ಅಪರಾಧಿಗೆ 10 ವರ್ಷ ಜೈಲು

ಟಿ.ವಿ ನೋಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟಿ.ವಿ ನೋಡುವ ನೆಪದಲ್ಲಿ ಮನೆಯೊಳಗೆ ಹೋಗಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿ ಶ್ರೀನಿವಾಸ್ (34) ಎಂಬಾತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣದ ವಿಚಾರಣೆಯನ್ನು ಸಿಸಿಎಚ್‌–71ನೇ ನ್ಯಾಯಾಧೀಶ ಮೋಹನ್ ಪ್ರಭು ನಡೆಸಿದ್ದರು. ಬಾಲಕಿ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಮೀನಾಕುಮಾರಿ ಎಸ್. ರಾಜವಂಶಿ ವಾದಿಸಿದ್ದರು.

ಪ್ರಕರಣದ ವಿವರ: ‘2017ರ ಆಗಸ್ಟ್ 27ರಂದು ಬಾಲಕಿ ತನ್ನ ಮನೆಯಲ್ಲಿದ್ದಳು. ಟಿ.ವಿ ನೋಡುವ ನೆಪದಲ್ಲಿ ಶ್ರೀನಿವಾಸ್ ಮನೆಯೊಳಗೆ ಹೋಗಿದ್ದ. ಬಾಲಕಿಯ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಹಾಗೂ ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಶ್ರೀನಿವಾಸ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಜಯನಗರ ಉಪವಿಭಾಗದ ಎಸಿಪಿ ಅವರೇ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು