ಬಾಲಕಿಗೆ ಲೈಂಗಿಕ ದೌರ್ಜನ್ಯ; ಯುವಕ ಸೆರೆ

7

ಬಾಲಕಿಗೆ ಲೈಂಗಿಕ ದೌರ್ಜನ್ಯ; ಯುವಕ ಸೆರೆ

Published:
Updated:

ಬೆಂಗಳೂರು: ತಿಂಡಿ ಕೊಡಿಸುವುದಾಗಿ ಕರೆದೊಯ್ದು ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ನವೀನ್ (23) ಎಂಬಾತನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಸಂಜೆ 6.30ರ ಸುಮಾರಿಗೆ ಬಾಲಕಿ ಮನೆ ಅಂಗಳದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದಿರುವ ಆರೋಪಿ, ‘ತಿಂಡಿ ಕೊಡಿಸುತ್ತೇನೆ ಬಾ’ ಎಂದು ಕರೆದಿದ್ದಾನೆ. ಬಳಿಕ ಆಕೆಯನ್ನು ಸಮೀಪದ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಅಳುತ್ತ ಮನೆಗೆ ಮರಳಿದ ಬಾಲಕಿ, ‘ನವೀನ್ ಅಂಕಲ್ ಬ್ಯಾಡ್‌ ಟಚ್ ಮಾಡಿದರು’ ಎಂದು ಹೇಳಿದ್ದಾಳೆ. ಇದರಿಂದ ಗಾಬರಿಗೊಂಡ ಪೋಷಕರು, ವಿಚಾರಿಸಲು ಆತನ ಮನೆ ಬಳಿ ತೆರಳಿದ್ದಾರೆ. ನವೀನ್ ಮನೆ ಬೀಗ ಹಾಕಿದ್ದ ಕಾರಣ, ಅಮೃತಹಳ್ಳಿ ಠಾಣೆ ಮೆಟ್ಟಿಲೇರಿದ್ದಾರೆ.

ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಶುಕ್ರವಾರ ರಾತ್ರಿಯೇ ನವೀನ್‌ನನ್ನು ಪತ್ತೆ ಮಾಡಿದ್ದಾರೆ. ‘ಮದ್ಯದ ಅಮಲಿನಲ್ಲಿ ಬಾಲಕಿ ಜತೆ ಅಸಭ್ಯವಾಗಿ ವರ್ತಿಸಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 2

    Angry

Comments:

0 comments

Write the first review for this !