ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಸಹಿ ಇರುವ ಛಾಯಾಚಿತ್ರ ₹6.47ಲಕ್ಷಕ್ಕೆ ಹರಾಜು?

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬಾಸ್ಟನ್: ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮದನ್ ಮೋಹನ ಮಾಳವೀಯ ಅವರು ಜತೆಯಾಗಿ ನಡೆದುಕೊಂಡು ಹೋಗುತ್ತಿರುವ ಛಾಯಾಚಿತ್ರ, ಇಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ₹6.47 ಲಕ್ಷಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ. ಈ ಚಿತ್ರದ ಮೇಲೆ ಗಾಂಧೀಜಿ ಸಹಿ ಕೂಡ ಇದೆ.

1931ರಲ್ಲಿ ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಸಭೆಯ ಎರಡನೇ ಅಧಿವೇಶನದ ನಂತರ ಈ ಛಾಯಾಚಿತ್ರ ಸೆರೆಹಿಡಿದಿದ್ದು, ಅದರ ಮೇಲೆ ಫೌಂಟೈನ್ ಪೆನ್ನಿನಿಂದ ಎಂ.ಕೆ.ಗಾಂಧಿ ಎಂದು ಸಹಿ ಮಾಡಲಾಗಿದೆ. ಚಿತ್ರದ ಹಿಂಭಾಗದಲ್ಲಿ ಅಸೋಸಿಯೇಟೆಡ್ ಪ್ರೆಸ್ ಆಫ್ ಗ್ರೇಟ್‌ ಬ್ರಿಟನ್‌ನ ಹಕ್ಕುಸ್ವಾಮ್ಯದ ಮುದ್ರೆ, ಮಾಳವೀಯ ಅವರನ್ನು ಗುರುತಿಸಿ, ದಿನಾಂಕ ಖಚಿತಪಡಿಸಿರುವ ಕಲೆಕ್ಟರ್‌ ಅವರ ಸಂಕೇತಗಳಿವೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪರವಾಗಿ ಗಾಂಧಿ ಮತ್ತು ಅವರಿಗೆ ಸಹಕರಿಸಲು ಮಾಳವೀಯ ಅವರು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು.

ಮೆಸಾಚುಸೆಟ್ಸ್‌ನ ಆರ್‌ಆರ್‌ ಆಕ್ಷನ್‌ ಕಂಪನಿ ನಡೆಸುತ್ತಿರುವ ಛಾಯಾಚಿತ್ರದ ಹರಾಜು ಪ್ರಕ್ರಿಯೆ ಮಾರ್ಚ್‌ 7ರಂದು ಮುಕ್ತಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT