ಬೆಂಗಳೂರು: ‘ಕನ್ನಡ ನಾಡು, ನುಡಿ, ಗಡಿ ವಿಚಾರ ಬಂದಾಗ ನಿಖರ, ನಿಷ್ಠುರವಾಗಿ ಮಾತನಾಡುತ್ತಿದ್ದ ಸಂಶೋಧಕ ಎಂ.ಚಿದಾನಂದಮೂರ್ತಿ ಅವರ ಹಲವು ಸಂಶೋಧನಾ ಕೃತಿಗಳು ಒಕ್ಕೂಟ ವ್ಯವಸ್ಥೆಗೆ ಅಪಾಯ ಬಂದ ಸಂದರ್ಭದಲ್ಲಿ ನೆರವಿಗೆ ಬರುತ್ತವೆ’ ಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ ಮತ್ತು ಸಪ್ನ ಪುಸ್ತಕ ಮಳಿಗೆ ಸಂಯುಕ್ತವಾಗಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ 'ಕನ್ನಡ- ಕನ್ನಡಿಗ- ಕರ್ನಾಟಕ' ಕೃತಿಯ ಪರಿಷ್ಕೃತ 17ನೇ ಮುದ್ರಣದ ಜನಾರ್ಪಣೆ, ಚಿದಾನಂದಮೂರ್ತಿ ಸ್ಮರಣೆ ಮತ್ತು ಎಸ್.ಎಲ್.ಭೈರಪ್ಪ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಾಮಾಣಿಕ ಸಂಶೋಧನೆಗೆ ಹೆಸರಾಗಿದ್ದ ಎಂ. ಚಿದಾನಂದಮೂರ್ತಿ ಅವರು ಗುರುವಿನ ಸ್ಥಾನದ ಮೌಲ್ಯಗಳ ಮೂರ್ತರೂಪದಂತೆ ಬಾಳಿ ಬದುಕಿದರು. ಅಧಿಕಾರ, ಪ್ರಶಸ್ತಿ ಬಯಸಿ ಎಂದೂ ಹೋದವರಲ್ಲ. ಈ ಕಾರಣದಿಂದಲೇ ಅವರು ಗೌರವ ಉಳಿಸಿಕೊಂಡಿದ್ದಾರೆ’ ಎಂದರು.

ಸಂಶೋಧಕ ಆರ್. ಶೇಷಶಾಸ್ತ್ರಿ ಮಾತನಾಡಿ, ‘ಚಿದಾನಂದಮೂರ್ತಿ ಖಚಿತ ಪುರಾವೆಗಳನ್ನು ಆಧರಿಸಿ ಸಂಶೋಧನೆ ನಡೆಸುತ್ತಿದ್ದರು. ಇಡೀ ಕರ್ನಾಟಕಕ್ಕೆ ಸಂಬಂಧಿಸಿದ ಬಹುಮುಖಿ ಧಾರೆಗಳ ಪರಿಪೂರ್ಣ ಗ್ರಂಥಾಲಯ ಸ್ಥಾಪಿಸಬೇಕು ಎಂಬ ಕನಸು ಹೊಂದಿದ್ದರು. ಅದನ್ನು ಸರ್ಕಾರ ಈಡೇರಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಅನುವಾದಕ ಬಿ. ಎಸ್. ಜಯಪ್ರಕಾಶ ನಾರಾಯಣ ಮಾತನಾಡಿ, ‘ಎಸ್.ಎಲ್.ಭೈರಪ್ಪ ಅವರು ನಂಬಿಕೆ, ಸಂಘರ್ಷ, ಅನುದಿನದ ಸಂಗತಿಗಳಿಗೆ ಗಂಭೀರ ತಾತ್ವಿಕತೆಯನ್ನು ತಮ್ಮ ಬರವಣಿಗೆ ಮೂಲಕ ಕಟ್ಟಿಕೊಡುತ್ತಿದ್ದರು. ಗ್ರಾಮೀಣ ಭಾಷೆಯ ಮೂಲಕವೇ ರಾಷ್ಟ್ರೀಯ ಸ್ತರದ ಪ್ರಜ್ಞೆಯನ್ನು ಸೃಷ್ಟಿಸಿದರು. ಲೇಖಕರನ್ನು ಎಡ-ಬಲ ತರಹದ ಚಿಂತನೆಗಳ ಸ್ವರೂಪದಲ್ಲಿ ನೋಡುವುದು ಸರಿಯಾದ ಕ್ರಮವಲ್ಲ’ ಎಂದು ಹೇಳಿದರು.

ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ. ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ, ಸಪ್ನ ಪುಸ್ತಕ ಮಳಿಗೆಯ ವ್ಯವಸ್ಥಾಪಕ ಆರ್.ದೊಡ್ಡೇಗೌಡ, ಕನ್ನಡ ಹೋರಾಟಗಾರ ಮ.ಚಂದ್ರಶೇಖರ್, ಕೆ.ಎನ್.ಭಗವಾನ್, ಬೆ.ರಾ.ನಾಗರಾಜ್, ರಮೇಶ್ ಬಾಬು, ಸುರೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.