ಬೆಂಗಳೂರು: ಕನ್ನಡ ಜನಶಕ್ತಿ ಕೇಂದ್ರವು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಂತವೇರಿ ಗೋಪಾಲ ಗೌಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ರಾಜಕೀಯ ವಿಡಂಬನೆ, ಹಾಸ್ಯ, ವ್ಯಂಗ್ಯೋಕ್ತಿ, ಹಳೇ ರಾಜಕಾರಣದ ಮೌಲ್ಯಗಳ ಸ್ಮರಣೆಗಳಿಗೆ ವೇದಿಕೆಯಾಯಿತು.

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮಾಜಿ ಸಚಿವೆ ಮೋಟಮ್ಮ, ‘ಶಾಂತವೇರಿ ಗೋಪಾಲ ಗೌಡ ಪ್ರಶಸ್ತಿ’ ಸ್ವೀಕರಿಸಿದ ವೈ.ಎಸ್.ವಿ. ದತ್ತ ಅವರ ಮಾತುಗಳಲ್ಲಿ ಹಿಂದಿನ ಮತ್ತು ಈಗಿನ ರಾಜಕಾರಣ ತೆರೆದುಕೊಂಡಿತು.

‘ಕಾಗೋಡು ಸತ್ಯಾಗ್ರಹದ ಮೂಲಕ ಭೂಮಿ ಇಲ್ಲದ ರೈತರಿಗೆ ಭೂಮಿ ಕೊಡಿಸಿದ್ದ ಕೀರ್ತಿ ಶಾಂತವೇರಿ ಗೋಪಾಲಗೌಡ ಅವರಿಗೆ ಸಲ್ಲುತ್ತದೆ. ಗೋಪಾಲಗೌಡರ ಹೋರಾಟದ ಫಲವಾಗಿಯೇ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ರಾಜ್ಯದ 21 ಲಕ್ಷ ಭೂಹೀನರಿಗೆ ಭೂಮಿ ನೀಡಿದ್ದರು. ಈಗ ಕೆಲವರು 2 ಕೆ.ಜಿ. ಅಕ್ಕಿ ನೀಡಿ ನಾನೇ ನೀಡಿದ್ದೇನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇವತ್ತಿನ ರಾಜಕಾರಣ ಆ ಮಟ್ಟಿಗೆ ಬಂದು ತಲುಪಿದೆ’ ಎಂದು ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

‘ಅರಸು ನೀಡಿರುವಂತಹ ಒಂದಾದರೂ ಯೋಜನೆಗಳು ಈಗ ಜಾರಿಯಾಗಿದೇಯಾ? ನಾವು ಮಾಡಿದ್ದೇ ಸರಿ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಬಾಯಿಯಲ್ಲಿ ಸಮಾಜವಾದ ಅಂದರಷ್ಟೇ ಸಾಲದು. ನಾವು ಮಾಡುವ ಕೆಲಸದಲ್ಲಿ ಕೂಡ ಇರಬೇಕು’ ಎಂದು ಕುಟುಕಿದರು.

‘ಗ್ಯಾರಂಟಿಯ ಹೆಚ್ಚು ಯೋಜನೆಗಳು ಹೆಣ್ಣುಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿವೆ. ಅದನ್ನು ನಂಬಿ ಗೆಲ್ಲಬಹುದು ಎಂಬ ಭ್ರಮೆ ಇಟ್ಟುಕೊಳ್ಳಬಾರದು. ಹೆಣ್ಣುಮಕ್ಕಳ ವೋಟಿಗೆ ಗ್ಯಾರಂಟಿ ಇಲ್ಲ. ಚುನಾವಣೆಯ ಸಂದರ್ಭದ ‘ಟ್ರೆಂಡ್’, ಹಂಚುವ ದುಡ್ಡೇ ಮತವನ್ನು ನಿರ್ಧರಿಸುತ್ತದೆ’ ಎಂದು ಮೋಟಮ್ಮ ಹೇಳಿದರು.

‘ರಾಜ್ಯದಲ್ಲಿ ಕಾಂಗ್ರೆಸ್ 180 ಸೀಟ್ ಗೆದ್ದಿದ್ದ ಸಮಯದಲ್ಲಿ ಪಕ್ಷವು ಅಧಿಕಾರಕ್ಕಾಗಿ ಒಡೆದು ಹೋಯಿತು. ಎಲ್ಲ ಕಾಲದಲ್ಲಿ ಎಲ್ಲ ದೇಶಗಳಲ್ಲಿ, ಎಲ್ಲ ಪಕ್ಷಗಳಲ್ಲಿ ಅಧಿಕಾರದ ಮಹಿಮೆ ಇಂಥದ್ದನ್ನು ಮಾಡಿಸಿದೆ. ಈಗಲೂ ನೀನಾ ನಾನಾ ಎಂಬ ಹಗ್ಗಜಗ್ಗಾಟ ನಡೆಯುತ್ತಿದೆ. ಹೈಕಮಾಂಡ್ ಯಾಕೆ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಹೇಳಿದರು.

‘ಜೆಡಿಎಸ್ಗೆ ಪ್ರಾದೇಶಿಕ ಪಕ್ಷವಾಗಿ ತನ್ನದೇ ಆದ ಮಹತ್ವ ಇತ್ತು. ತೆನೆ ಹೊತ್ತ ಮಹಿಳೆ ಚಿಹ್ನೆಯಲ್ಲಿ ತೆನೆಯು ಜಾತ್ಯತೀತ ತತ್ವದಂತಿತ್ತು. ಅದನ್ನು ಕೊಂಡೋಗಿ ಮೋದಿಯ ಕಾಲಬುಡದಲ್ಲಿ ಯಾಕೆ ಇಡಲು ಬಿಟ್ರಿ ದತ್ತ ಅವರೇ? ನಿಮಗೆ ದೇವೇಗೌಡರು ಆತ್ಮೀಯರು. ನೀವು ತತ್ವ ಸಿದ್ಧಾಂತಕ್ಕೆ ಬದ್ಧರಾದವರು. ನೀವಾದರೂ ದೇವೇಗೌಡರಿಗೆ ಹೇಳಬೇಕಿತ್ತು’ ಎಂದು ದತ್ತ ಅವರ ಕಾಲೆಳೆದರು.

‘ನೀವು ನಮ್ಮ ಪಕ್ಷಕ್ಕೂ ಬರಬಹುದು’ ಎಂದು ದತ್ತ ಅವರನ್ನು ಆಹ್ವಾನಿಸಿದ ಮೋಟಮ್ಮ, ‘ನಮ್ಮ ಪಕ್ಷದಲ್ಲಿಯೂ ಮೇಲಾಟ ನಡೆಯುತ್ತಿದೆ’ ಎಂದು ಎಚ್ಚರಿಸಿದರು. ದತ್ತ ಅವರು ಕಾಂಗ್ರೆಸ್ಗೆ ಬಂದಿದ್ದರು. ‘ಟಿಕೆಟ್ ಸಿಗದೇ ವಾಪಸ್ಸಾದರು’ ಎಂದು ಸಭಿಕರು ನೆನಪು ಮಾಡಿದರು.

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ, ಗೌರವಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ, ಉಪಾಧ್ಯಕ್ಷ ಶಂಕರ್ ಹೂಗಾರ ಉಪಸ್ಥಿತರಿದ್ದರು.

ಸೋಲಿಸಿದ ಧರ್ಮಸ್ಥಳ ಮಂಜುನಾಥ

‘ಏನೂ ಇಲ್ಲದ ನನ್ನನ್ನು ಕಡೂರಿನ ಜನರು ಭಾರಿ ಅಂತರದಿಂದ ಗೆಲ್ಲಿಸಿದ್ದರು. ಆನಂತರ 2018ರ ಚುನಾವಣೆಯ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿಯೇ ಸುಮಾರು 30 ಸಾವಿರ ಜನರು ಬಂದಿದ್ದರು. ಅಲ್ಲಿ ಸೇರಿದ್ದವರ ಮನೆಗಳಿಂದ ತಲಾ ಇನ್ನೊಂದು ಓಟು ಬಂದರೂ ಸಾಕು ಗೆಲುವು ಗ್ಯಾರಂಟಿ ಅಂತಂದುಕೊಂಡಿದ್ದೆ. ಆದರೆ ಸೋತುಬಿಟ್ಟೆ. ಯಾಕೆ ಸೋತೆ ಎಂದು ವಿಚಾರಿಸಿದಾಗ ನನ್ನ ಪ್ರತಿಸ್ಪರ್ಧಿ ಮನೆ ಮನೆಗೆ ಕವರ್ ನೀಡುವುದರ ಜೊತೆಗೆ ಧರ್ಮಸ್ಥಳ ಮಂಜುನಾಥನ ಫೋಟೊ ನೀಡಿ ಅದರ ಮೇಲೆ ಆಣೆ ಮಾಡಿಸಿಕೊಂಡಿದ್ದರು. ದೇವರಿಗೆ ಆಣೆ ಮಾಡಿದಂತೆ ನಡೆದುಕೊಳ್ಳಲೇಬೇಕಿತ್ತು. ಹಾಗಾಗಿ ಗಂಡ–ಹೆಂಡತಿಯಲ್ಲಿ ಒಬ್ಬರ ಓಟು ದೇವರಿಗೆ ಒಬ್ಬರ ವೋಟು ನಿಮಗೆ ಹಾಕಿದ್ದೇವೆ ಎಂದು ಹಲವರು ಹೇಳಿಕೊಂಡರು’ ಎಂದು ವೈ.ಎಸ್.ವಿ. ದತ್ತ ಹೇಳಿದರು. ‘

ಧರ್ಮಸ್ಥಳದ ಮಂಜುನಾಥ ಸೋಲಿಸಿದ ಪ್ರಥಮ ವ್ಯಕ್ತಿ ನಾನೇ ಅಂತಂದುಕೊಂಡಿದ್ದೆ. ಶಾಂತವೇರಿ ಗೋಪಾಲಗೌಡರ ಚರಿತ್ರೆಯನ್ನು ಓದಿದ ಮೇಲೆ ನಾನು ಮೊದಲಿಗನಲ್ಲ ಗೋಪಾಲಗೌಡರೇ ಮೊದಲಿಗರು ಎಂದು ಗೊತ್ತಾಯಿತು. 1952ರಲ್ಲಿ ಹಣವನ್ನೂ ಕೊಟ್ಟು ಮತವನ್ನೂ ನೀಡಿ ಜನರು ಗೋಪಾಲಗೌಡರನ್ನು ಗೆಲ್ಲಿಸಿದ್ದರು. 1957ರ ಚುನಾವಣೆಯ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿ ಜನರು ಸೋಲಿಸಿದ್ದರು. ನೋಡಿದರೆ ಆಗಲೂ ಪ್ರತಿಸ್ಪರ್ಧಿಗಳು ಧರ್ಮಸ್ಥಳ ಮಂಜುನಾಥನ ಫೋಟೊ ಮೇಲೆ ಆಣೆ ಮಾಡಿಸಿಕೊಂಡಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.