ಬೆಂಗಳೂರು: ‘ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡಲಾಗುವುದು’ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ‘ಶಿವಮೊಗ್ಗ ಜಿಲ್ಲೆಯ ಬೆಂಗಳೂರು ನಿವಾಸಿ ವಕೀಲರ ವೇದಿಕೆ’ ಬುಧವಾರ ಸಂಜೆ ತುರ್ತು ಸಭೆ ಕರೆದಿದೆ.

‘ಶಿವಮೊಗ್ಗ ಜಿಲ್ಲೆಯನ್ನು ಉದ್ದೇಶಿತ ಮಂಗಳೂರು ಸಂಚಾರಿ ಪೀಠಕ್ಕೆ ಸೇರ್ಪಡೆ ಮಾಡಲಾಗುತ್ತಿದೆ ಎಂಬ ವರದಿಗಳು ಅಘಾತಕಾರಿ. ಈ ಕುರಿತಂತೆ ಈಗಾಗಲೇ ಸುದ್ದಿ ವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುರುವುದು ಈ ಬಗೆಗಿನ ಕಳವಳವನ್ನು ಮತ್ತಷ್ಟು ಹೆಚ್ಚಿಸಿವೆ’ ಎಂದು ವೇದಿಕೆಯ ಸಂಚಾಲಕರೂ ಆದ ಹೈಕೋರ್ಟ್ ವಕೀಲ ಎಂ.ಚಾಮರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಈ ನಿಟ್ಟಿನಲ್ಲಿ ಹೈಕೋರ್ಟ್ನ ಪದಾಂಕಿತ ಹಿರಿಯ ವಕೀಲರಾದ ಸುಬ್ರಹ್ಮಣ್ಯ ಜೋಯಿಸ್, ಎಸ್.ದಿವಾಕರ್, ಶ್ರೀರಂಗ ಸುಬ್ಬಣ್ಣ, ಜಿ.ಕೃಷ್ಣಮೂರ್ತಿ, ಕೆ.ಕೆ.ಚೈತನ್ಯ, ಆರ್.ವಿ.ಎಸ್.ನಾಯಕ್ ಸೇರಿದಂತೆ ಇನ್ನಿತರ ಹಿರಿಯ ವಕೀಲರ ಸಮ್ಮುಖದಲ್ಲಿ ಚರ್ಚಿಸಲು ಇದೇ 28ರಂದು (ಬುಧುವಾರ) ಸಂಜೆ 4.30ಕ್ಕೆ ಕ್ಯಾಪಿಟಲ್ (ಪರಾಗ್) ಹೋಟೆಲ್ನಲ್ಲಿ ತುರ್ತು ಸಭೆ ಕರೆಯಲಾಗಿದೆ. ಆದ್ದರಿಂದ, ಶಿವಮೊಗ್ಗ ಜಿಲ್ಲೆಯ ಬೆಂಗಳೂರಿನಲ್ಲಿರುವ ವಕೀಲರು ಸಭೆಗೆ ಬಂದು ತಮ್ಮ ಸಲಹೆ ಸೂಚನೆ ನೀಡಬೇಕು’ ಎಂದು ಅವರು ವಿನಂತಿಸಿದ್ದಾರೆ. ಸಂಪರ್ಕ ಸಂಖ್ಯೆ: 94482 60350.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.