ಸೋಮವಾರ, ಸೆಪ್ಟೆಂಬರ್ 16, 2019
23 °C

ಚಿನ್ನದ ಅಂಗಡಿಯಲ್ಲಿ ದರೋಡೆಕೋರರಿಂದ ಗುಂಡಿನ ದಾಳಿ

Published:
Updated:

ಬೆಂಗಳೂರು: ನಗರದ ವೈಯಾಲಿಕಾವಲ್‌ನಲ್ಲಿರುವ ಸಾಮ್ರಾಟ್ ಜ್ಯುವೆಲರ್ಸ್‌ಗೆ ಚಿನ್ನ ಖರೀದಿಸುವ ನೆಪದಲ್ಲಿ ಬಂದ ಮೂವರು ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.

ಜ್ಯುವೆಲರ್ಸ್‌ಗೆ ಬಂದ ಗ್ರಾಹಕರಂತೆ ಬಂದ ಮೂವರು, ಸಚಿನ್ ತೆಂಡುಲ್ಕರ್ ಚೈನ್ ಕೊಡಿ ಎಂದು ಕೇಳಿದ್ದಾರೆ, ಬಳಿಕ ತಮ್ಮಲ್ಲಿದ್ಗದ ಪಿಸ್ತೂಲ್‌ ಹೊರತೆಗೆದ ಅಂಗಡಿಯಲ್ಲಿ ಇದ್ದವರನ್ನು ಬೆದರಿಸಿದ್ದಾರೆ. ತಕ್ಷಣ ಅಂಗಡಿಯ ಮಾಲೀಕ ಕುರ್ಚಿಯನ್ನು ತೆಗೆದು ಆ ಮೂವರ ಮೇಲೆ ಎಸೆದು ಜೋರಾಗಿ ಕೂಗಿಕೊಂಡಿದ್ದಾರೆ.

ಈ ವೇಳೆ ಗಲಿಬಿಲಿಕೊಂಡ ದರೋಡೆಕೋರರು, ಮಿಸ್ ಫೈರ್ ಮಾಡಿದ ತಪ್ಪಿಸಿಕೊಂಡಿದ್ದಾರೆ. ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಧಾವಿಸಿದ ವೈಯಾಲಿಕಾವಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

Post Comments (+)