ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳ ಅಂತರರಾಷ್ಟ್ರೀಯ ಉತ್ಸವ 11ರಿಂದ
ಬೆಂಗಳೂರು: ಮೈಸೂರು ಸಿನಿಮಾ ಸೊಸೈಟಿಯಿಂದ ‘ಪರಿದೃಶ್ಯ’ ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳ ಅಂತರರಾಷ್ಟ್ರೀಯ ಉತ್ಸವ ಫೆ. 11 ಮತ್ತು 12ರಂದು ಬೆಂಗಳೂರಿನ ಸುಚಿತ್ರಾ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿಯಲ್ಲಿ ನಡೆಯಲಿದೆ.
‘ಈ ಉತ್ಸವದಲ್ಲಿ ಇಸ್ರೇಲ್, ಅಮೆರಿಕಾ, ಫ್ರಾನ್ಸ್, ಇಟಲಿ ಮತ್ತು ಇರಾನ್ ಸೇರಿ ಪ್ರಪಂಚದ 10 ದೇಶಗಳಿಂದ 150 ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ. ಇದರ ಅಂಗವಾಗಿ ಪರಿದೃಶ್ಯದ ವತಿಯಿಂದ 25 ವಿವಿಧ ಪ್ರಶಸ್ತಿಗಳನ್ನು ಕಿರುಚಿತ್ರಗಳು–ಹವ್ಯಾಸಿಗಳು ಮತ್ತು ವೃತ್ತಿಪರರು, ಸಾಕ್ಷ್ಯಚಿತ್ರಗಳು–ಹವ್ಯಾಸಿಗಳು ಮತ್ತು ವೃತ್ತಿಪರರ ಗುಂಪುಗಳಲ್ಲಿ ನೀಡಲಾಗುತ್ತಿದೆ’ ಎಂದು ಪರಿದೃಶ್ಯದ ಸಲಹೆಗಾರ ರಾಘವೇಂದ್ರ ಕುಲಕರ್ಣಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಆಯ್ದ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳ ಪ್ರದರ್ಶನ, ವಿಷಯ ತಜ್ಞರಿಂದ ಮಾಸ್ಟರ್ ತರಗತಿಗಳು ನಡೆಯಲಿವೆ. ಫೆ. 12ರಂದು ಸಂಜೆ 4.15ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ’ ಎಂದು ತಿಳಿಸಿದರು.
ಮಾಹಿತಿಗಾಗಿ: 9945242996ಗೆ ಸಂಪರ್ಕಿಸಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.