ಬೆಂಗಳೂರು: ಪೀಠೋಪಕರಣ ಮಳಿಗೆ ಮಾಲೀಕರೊಬ್ಬರನ್ನು ಬೆದರಿಸಿ ₹ 5 ಲಕ್ಷ ನೀಡುವಂತೆ ಬೇಡಿಕೆ ಇರಿಸಿದ್ದ ಆರೋಪದಡಿ ರೌಡಿ ಸೇರಿ ಇಬ್ಬರನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ನಿವಾಸಿ ವೆಂಕಟೇಶ್ ಅಲಿಯಾಸ್ ಒಂಟೆ ಕೈ ಹಾಗೂ ಸೈಯದ್ ಇಸಾಕ್ ಬಂಧಿತರು. ಗೂಂಡಾ ಕಾಯ್ದೆಯಡಿ ಜೈಲು ಸೇರಿದ್ದ ಒಂಟೆ ಕೈ, ಇತ್ತೀಚೆಗೆ ಜಾಮೀನು ಮೇಲೆ ಹೊರಬಂದಿದ್ದ. ವ್ಯಾಪಾರಿಗಳು ಹಾಗೂ ಉದ್ಯಮಿಗಳನ್ನು ಬೆದರಿಸಿ ಹಣ ಕಿತ್ತುಕೊಳ್ಳುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಠಾಣೆ ವ್ಯಾಪ್ತಿಯ ಪೀಠೋಪಕರಣ ಮಳಿಗೆಯೊಂದಕ್ಕೆ ಇತ್ತೀಚೆಗೆ ನುಗ್ಗಿದ್ದ ಒಂಟೆ ಕೈ ಕಡೆಯ ಸಹಚರರು, ಹಫ್ತಾ ನೀಡದಿದ್ದರೆ ಕೊಲೆ ಮಾಡುವುದಾಗಿ ಮಾಲೀಕರನ್ನು ಬೆದರಿಸಿದ್ದರು. ಈ ಸಂಬಂಧ ಮಾಲೀಕ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತಷ್ಟು ಮಂದಿ ತಲೆಮರೆಸಿಕೊಂಡಿದ್ದಾರೆ’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.