ಸಚಿವರ ವಾಹನಗಳ ರಿಪೇರಿ ಮೊತ್ತ ₹1.34 ಕೋಟಿ

ಮಂಗಳವಾರ, ಜೂಲೈ 16, 2019
26 °C

ಸಚಿವರ ವಾಹನಗಳ ರಿಪೇರಿ ಮೊತ್ತ ₹1.34 ಕೋಟಿ

Published:
Updated:

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ, ಸಚಿವರು ಮತ್ತು ಸಿಬ್ಬಂದಿ ವಾಹನಗಳ ರಿಪೇರಿಗೆ ವೆಚ್ಚವಾದ ಒಟ್ಟು ಮೊತ್ತ ₹1,34,64,197.

ಉತ್ತರ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಭೀಮಪ್ಪ ಗಡಾದ ಅವರು ಸರ್ಕಾರದಿಂದ ಮಾಹಿತಿ ಹಕ್ಕು ಕಾಯ್ದೆ ಅಡಿ ಈ ಮಾಹಿತಿಯನ್ನು ಪಡೆದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವಧಿಯಲ್ಲಿ ಸಚಿವರ ಉಪಯೋಗಕ್ಕಾಗಿ 10 ಕ್ರಿಸ್ಟಾ, 8 ಇನೋವಾ ಮತ್ತು 2 ಫಾರ್ಚುನರ್‌ ಸೇರಿ ಒಟ್ಟು 20 ಹೊಸ ವಾಹನಗಳನ್ನು ಖರೀದಿಸಲಾಗಿತ್ತು. ಅಲ್ಲದೆ, ಮುಖ್ಯಮಂತ್ರಿ ಕಚೇರಿಯ ಅಧಿಕಾರಿ, ಸಿಬ್ಬಂದಿಗಾಗಿ 20 ವಾಹನ ಖರೀದಿಸಲಾಗಿತ್ತು. ಈ ಎಲ್ಲ ವಾಹನಗಳ ರಿಪೇರಿ ವೆಚ್ಚ ₹39,76,682 ಎಂದು ಹೇಳಿದ್ದಾರೆ.

ಸಚಿವ ಯು.ಟಿ.ಖಾದರ್‌ ವಾಹನ ರಿಪೇರಿಗೆ ಅತಿ ಹೆಚ್ಚು ಎಂದರೆ, ₹5,80,233 ವೆಚ್ಚ ಮಾಡಲಾಗಿದ್ದು, ರಮಾನಾಥ ರೈ ಅವರ ವಾಹನ ರಿಪೇರಿಗೆ ₹5,17,672 ಖರ್ಚಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !