ಬೆಂಗಳೂರು: ‘ನಮ್ಮ ಸಮಾಜದ ರಾಜಕೀಯ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಲಾಗುತ್ತಿದೆ. ಧಾರ್ಮಿಕ ಸಂಕೇತಗಳು ಸರ್ಕಾರದ ಸಂಕೇತಗಳಾಗುತ್ತಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜದ ಬದಲು ಬೇರೆ ಯಾವುದೋ ಬಣ್ಣದ ಧ್ವಜ ಹಾರಬಹುದು’ ಎಂದು ರಾಜಕೀಯ–ಆರ್ಥಿಕ ವಿಶ್ಲೇಷಕ ಪರಕಾಲ ಪ್ರಭಾಕರ್ ಆತಂಕ ವ್ಯಕ್ತಪಡಿಸಿದರು.

‘ಎಸ್ಐಆರ್ (ವಿಶೇಷ ಸಮಗ್ರ ಪರಿಷ್ಕರಣೆ) ಷಡ್ಯಂತ್ರವನ್ನು ಹಿಮ್ಮೆಟ್ಟಿಸಲು ಅಳವಡಿಸಬೇಕಾದ ಕ್ರಮಗಳೇನು?’ ಕುರಿತು ಸೋಮವಾರ ನಡೆದ ಕರ್ನಾಟಕದ ಸರ್ವ ಸಮುದಾಯಗಳು, ಸರ್ವ ಸಂಘಟನೆಗಳು ಹಾಗೂ ಸರ್ವ ಪಕ್ಷಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಈ ವರ್ಷ ಆಗಸ್ಟ್ 15ರಂದು ತ್ರಿವರ್ಣಧ್ವಜ ಹಾರಬಹುದು. ಮುಂದಿನ ವರ್ಷ ಹೇಳಲಾಗದು. ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಬೇಕು. ಆ ನಂತರ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡಬೇಕು ಎಂದು ಈಗಾಗಲೇ ಸರ್ಕಾರ ಸುತ್ತೋಲೆ ಹೊರಡಿಸಿದೆ. ಜನ ಗಣ ಮನ ಹಾಡುವುದು ಬೇಡ ಎಂದು ಮುಂದೆ ಹೇಳಲೂಬಹುದು. ಅಪಾಯಕಾರಿ ಪರಿಸ್ಥಿತಿ ನಮ್ಮ ಮುಂದಿದೆ’ ಎಂದು ಹೇಳಿದರು.

‘ನಮ್ಮನ್ನು ಯಾರು ಆಡಳಿತ ಮಾಡಬೇಕು ಎಂಬುದನ್ನು ಇಲ್ಲಿಯವರೆಗೆ ಮತದಾರರು ತಮ್ಮ ಮತಗಳ ಮೂಲಕ ಆಯ್ಕೆ ಮಾಡುತ್ತಿದ್ದರು. ಎಸ್ಐಆರ್ ಮೂಲಕ ಇದನ್ನು ತಿರುವು–ಮುರುವು ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಯಾರು ಮತ ಚಲಾಯಿಸಬೇಕು. ಯಾರು ಮತದಾರರಾಗಿರಬೇಕು ಎಂಬುದನ್ನು ಸರ್ಕಾರ ನಿರ್ಧರಿಸಲು ಹೊರಟಿದೆ’ ಎಂದು ಆರೋಪಿಸಿದರು.

ಎಸ್ಐಆರ್ ಅಂದರೆ ಮತದಾರರ ಪಟ್ಟಿಯ ಶುದ್ಧೀಕರಣ ಎಂದು ಹೇಳುತ್ತಿದ್ದಾರೆ. ಸ್ಥಳ ಬದಲಾಯಿಸಿದವರು, ಸ್ಥಳದಲ್ಲಿ ಇಲ್ಲದವರು, ಎರಡೆರಡು ಕಡೆ ಹೆಸರು ಇರುವವರು ಮತ್ತು ಸತ್ತವರ ಹೆಸರು ತೆಗೆಯುವ ಪ್ರಕ್ರಿಯೆ ಎನ್ನುತ್ತಿದ್ದಾರೆ. ಇದು ನಿಜವಾಗಿದ್ದಲ್ಲಿ ಯಾರ ಆಕ್ಷೇಪವೂ ಇರಲಿಲ್ಲ. ಆದರೆ, ಅಲ್ಲಿ ನಡೆಯುತ್ತಿರುವುದೇ ಬೇರೆ. ಇದಕ್ಕೆ ಈಗಾಗಲೇ, ಬಿಹಾರದಲ್ಲಿ ನಡೆದಿರುವ ಎಸ್ಐಆರ್ ಸಾಕ್ಷಿಯಾಗಿದೆ. ಎಸ್ಐಆರ್ ಪ್ರಕ್ರಿಯೆ ಎಲ್ಲ ರಾಜ್ಯಗಳಲ್ಲಿ ಪೂರ್ಣಗೊಂಡಾಗ ಸುಮಾರು 16.5 ಕೋಟಿ ಜನರು ಪಟ್ಟಿಯಿಂದ ಹೊರಗುಳಿಯಲಿದ್ದಾರೆ. ಅವರು ಅಲ್ಪಸಂಖ್ಯಾತರು, ಆದಿವಾಸಿಗಳು, ವಲಸೆ ಕಾರ್ಮಿಕರು, ಬಡವರು ಆಗಿರುತ್ತಾರೆ. ಇದು ರಕ್ತ ರಹಿತ ರಾಜಕೀಯ ಕಗ್ಗೊಲೆ ಎಂದರು.

ಕ್ಷೇತ್ರಗಳ ಪುನರ್ವಿಂಗಡಣೆ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಅಭಿಪ್ರಾಯಕ್ಕೆ ಬೆಲೆ ಇಲ್ಲದಂತೆ ಮಾಡಲಾಗುತ್ತಿದೆ. ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ, ಪುದುಚೆರಿ, ಗೋವಾದಲ್ಲಿ ಒಟ್ಟು 130 ಲೋಕಸಭಾ ಕ್ಷೇತ್ರಗಳಿವೆ. ಪುನರ್ವಿಂಗಡಣೆ ಬಳಿಕ 173ಕ್ಕೆ ಏರಲಿವೆ. ಇದೇ ಹೊತ್ತಿನಲ್ಲಿ ಉತ್ತರ ಪ್ರದೇಶ ಒಂದರಲ್ಲೇ 143 ಕ್ಷೇತ್ರಗಳು ಆಗಲಿವೆ. ಉತ್ತರದ ಎರಡೂವರೆ ರಾಜ್ಯಗಳ ಕ್ಷೇತ್ರಗಳು ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಒಟ್ಟು ಕ್ಷೇತ್ರಗಳಿಗಿಂತ ಹೆಚ್ಚು ಇರಲಿವೆ ಎಂದು ವಿವರಿಸಿದರು.

ಸಭೆಯಲ್ಲಿ ಹಾಜರಿದ್ದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹಾಗೂ ಶಾಸಕ ರಿಜ್ವಾನ್ ಅರ್ಷದ್ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಹಕ್ಕೊತ್ತಾಯಗಳನ್ನು ಸಲ್ಲಿಸಲಾಯಿತು.

ಕೇರಳ ಸರ್ಕಾರದಿಂದಲೇ ಗುರುತಿನ ಚೀಟಿ

‘ಕೇರಳದಲ್ಲಿ ಕೆಲವರಿಗೆ ಯಾವುದೇ ದಾಖಲೆ ಇಲ್ಲ. ಅಂಥವರಿಗೆ ರಾಜ್ಯ ಸರ್ಕಾರವೇ ಗುರುತಿನ ಚೀಟಿ ನೀಡಿದ್ದು, ಅದನ್ನು ದಾಖಲೆಯಾಗಿ ಬಳಸಬಹುದು ಎಂದು ಹೇಳಿದೆ. ಎಲ್ಲ ರಾಜ್ಯಗಳಲ್ಲಿ ಈ ರೀತಿ ಮಾಡಬೇಕು’ ಎಂದು ತಮಿಳುನಾಡು ಮತದಾರರ ಹಕ್ಕು ವೇದಿಕೆಯ ಸಮನ್ವಯಕಾರ ಥಾಮಸ್ ಫ್ರಾಂಕೊ ಹೇಳಿದರು.

‘2002–03ರ ಮತಪಟ್ಟಿಯಲ್ಲಿ ಹೆಸರು, ಸಂಖ್ಯೆ, ಮತಗಟ್ಟೆ ಹೆಸರು, ಮತಗಟ್ಟೆ ಸಂಖ್ಯೆ ಎಲ್ಲಿತ್ತು ಎಂಬುದು ಯಾರಿಗೆ ನೆನಪಿರಲು ಸಾಧ್ಯ. ಹಾಗಾಗಿ 2002-03ರ ಪಟ್ಟಿಯನ್ನು ವಿಶೇಷ ಸಮಗ್ರ ಪರಿಷ್ಕರಣೆಗೆ ಜೋಡಿಸಬೇಕಾಗಿಲ್ಲ ಎಂಬುದು ನಿರ್ಧಾರವಾದರೆ ಸಮಸ್ಯೆ ಕಡಿಮೆಯಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.