ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರಾಗ ರಚಿಸಿ ದಾಖಲೆ ನಿರ್ಮಿಸಿದ ಸಿರಿ

Last Updated 5 ಡಿಸೆಂಬರ್ 2020, 16:50 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಡೆಕ್ಕನ್‌ ಶಾಲೆಯ ವಿದ್ಯಾರ್ಥಿನಿ ಸಿರಿ ಗಿರೀಶ್‌ ಹೊಸ ರಾಗ ರಚಿಸಿ ಹಾಗೂ ಅದೇ ರಾಗಕ್ಕೆ ಸಾಹಿತ್ಯವನ್ನೂ ರಚಿಸುವ ಮೂಲಕ ‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌’ನಲ್ಲಿ ಸ್ಥಾನ ಪಡೆದಿದ್ದಾಳೆ. ಪದಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ವಿದ್ಯಾರ್ಥಿನಿಯನ್ನು ಅಭಿನಂದಿಸಲಾಗಿದೆ.

ಹದಿನಾಲ್ಕು ವರ್ಷದ ಸಿರಿ 2019ರ ಜನವರಿಯಲ್ಲಿ ‘ನಮೋ ವೀಣಾಪಾಣಿ’ ಎಂಬ ರಾಗ ರಚಿಸಿದ್ದಾಳೆ. ಇದೇ ರಾಗದಲ್ಲಿ ‘ದೇವಿ ಸರಸ್ವತಿ ರೂಪಿಣಿ’ ಎಂಬ ಹಾಡನ್ನು ಬರೆದು ಗಮನ ಸೆಳೆದಿದ್ದಾಳೆ.

ವಿದುಷಿ ಶೋಭಾ ಶರ್ಮಾ ಅವರ ಬಳಿ ಎಂಟು ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿರುವ ಸಿರಿ, ಗಿಟಾರ್, ಜಿಯೊ ಶ್ರೆಡ್‌, ಕೀಬೋರ್ಡ್‌ ಹಾಗೂ ವೀಣಾವಾದನದಲ್ಲಿಯೂ ಆಸಕ್ತಿ ಹೊಂದಿದ್ದಾಳೆ. ವಿದುಷಿ ಡಾ. ಜಯಂತಿ ಕುಮಾರೇಶ್ ಅವರ ವೀಣಾ ವಾದನವನ್ನು ಸಂಗೀತ ಕಛೇರಿಗಳಲ್ಲಿ, ಆನ್‌ಲೈನ್‌ನಲ್ಲಿ ನೋಡಿರುವ ಸಿರಿ, ತಾನು ರಚಿಸಿರುವ ಹೊಸ ರಾಗವನ್ನು ಜಯಂತಿ ಅವರಿಗೇ ಅರ್ಪಿಸಿದ್ದಾಳೆ.

‘ಸಂಸ್ಕೃತ ಭಾರತೀ’ ಸಂಸ್ಥೆ ನಡೆಸಿದ ಸಂಸ್ಕೃತ ನಿನಾದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುವ ಸಿರಿ, ಅನೇಕ ಸಂಘ–ಸಂಸ್ಥೆಗಳು ನಡೆಸಿರುವ ಸ್ಪರ್ಧೆಗಳಲ್ಲಿ ಅತ್ಯುತ್ತಮವಾಗಿ ಹಾಡಿ ಪ್ರಶಸ್ತಿಗಳನ್ನೂ ಪಡೆದಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT