ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀತಾರಾಮ ಲಕ್ಷ್ಮಣ ದೇವಸ್ಥಾನ ಜೀರ್ಣೋದ್ಧಾರ

Last Updated 19 ಆಗಸ್ಟ್ 2022, 22:04 IST
ಅಕ್ಷರ ಗಾತ್ರ

ಬೆಂಗಳೂರು: ಜೆ.ಪಿ. ನಗರದ ಜರಗನಹಳ್ಳಿಯ ಸೀತಾರಾಮ ಲಕ್ಷ್ಮಣ ಹನುಮಂತ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನೆ, ನೂತನ ವಿಮಾನ ಗೋಪುರ, ಗರುಡ ಸ್ತಂಭ ಮಹಾಕುಂಭಾಭಿಷೇಕ ಮಹೋತ್ಸವ ಆ. 19 ರಿಂದ 21ರವರೆಗೆ ನಡೆಯಲಿದೆ.

ಶನಿವಾರ (ಆ.20) ವಾಸುದೇವ ಶುದ್ಧಿ, ಪುಣ್ಯಾಹವಾಚನ, ದ್ವಾರ ಆರಾ ಧನೆ, ಕಳಶ ಆರಾಧನೆ, ಆಂಜನೇಯಸ್ವಾಮಿ ಮೂಲಮಂತ್ರ ಹೋಮ, ಬೆಳಿಗ್ಗೆ 8ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.

ಭಾನುವಾರ (21) ಬೆಳಿಗ್ಗೆ 6.15ರಿಂದ 6.45ಕ್ಕೆ ಮಹಾ ಕುಂಭಾ ಭಿಷೇಕ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನೆರವೇರಲಿದೆ.

ಬೆಳಿಗ್ಗೆ 11ಕ್ಕೆ ಜರಗನಹಳ್ಳಿ ಗ್ರಾಮದ ಮಹಿಳೆಯರಿಂದ ಸ್ವಾಮಿಗೆ ಬೆಲ್ಲದಾರತಿ, ಮಧ್ಯಾಹ್ನ 12.30ಕ್ಕೆ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಮಾಡಲಾಗುವುದು. ಸಂಜೆ 6ಕ್ಕೆ ಗ್ರಾಮದ ರಾಜ ಬೀದಿಗಳಲ್ಲಿ ಸೀತಾರಾಮ ಲಕ್ಷ್ಮಣ ಹನುಮಂತ ಮೂರ್ತಿಗಳನ್ನು ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT