ಆನೇಕಲ್: ಪಟ್ಟಣಕ್ಕೆ ಸಮೀಪದ ಹಾಲ್ದೇನಹಳ್ಳಿ ರೈಲ್ವೇ ನಿಲ್ದಾಣದಲ್ಲಿ ಮಂಗಳವಾರ ಕಾಡುಪಾಪ (ಸ್ಲೆಂಡರ್ ಲಾರಿಸ್) ಕಾಣಿಸಿಕೊಂಡಿದೆ. ಸಾರ್ವಜನಿಕರು ಕಾಡುಪಾಪ ಸಂರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು.

ಬುಧವಾರ ಮಧ್ಯಾಹ್ನ 3ರ ಸುಮಾರಿಗೆ ಹಾಲ್ದೇನಹಳ್ಳಿ ರೈಲ್ವೇ ಹಳಿಯ ಸಮೀಪ ಕಾಡುಪಾಪ ಕಾಣಿಸಿಕೊಂಡಿದೆ. ಎಲ್ಲಿಂದರ ಬಂದಿತು ಎಂಬುದರ ಬಗ್ಗೆ ನಿಖರ ಮಾಹಿತಿ ದೊರೆತಿಲ್ಲ. ಸಾರ್ವಜನಿಕರು ಕಾಡುಪಾಪವನ್ನು ಕುತೂಹಲದಿಂದ ವೀಕ್ಷಿಸಿದರು. ಜನರು ಗುಂಪುಗೂಡಿದ್ದರಿಂದ ಕಾಡುಪಾಪ ಗಾಬರಿಗೊಂಡಿತ್ತು. ಅತ್ತಿಂದಿತ್ತ ಓಡಾಡುತ್ತಿದ್ದ ಕಾಡುಪಾಪವನ್ನು ಸ್ಥಳೀಯರಾದ ಮಹೇಶ್ ಚಿಕ್ಕಹಾಗಡೆ ಮತ್ತು ರಘು ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು.

ಮಹೇಶ್ ಮಾತನಾಡಿ, ಕಾಡುಪಾಪ ಅಪರೂಪದ ಪ್ರಾಣಿ. ಆನೇಕಲ್ ಪಟ್ಟಣಕ್ಕೆ ಕಳೆದ ಕೆಲ ತಿಂಗಳಿಂದ ಆನೆ, ಚಿರತೆ, ಕಾಡೆಮ್ಮೆ ಸೇರಿದಂತೆ ವಿವಿಧ ಪ್ರಾಣಿಗಳು ನಿರಂತರವಾಗಿ ಬರುತ್ತಿದೆ. ಈ ಪಟ್ಟಿಗೆ ಕಾಡುಪಾಪ ಸಹ ಸೇರ್ಪಡೆಯಾಗಿದೆ. ಅರಣ್ಯ ಇಲಾಖೆ ಸುಪರ್ದಿಗೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.