ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಟ್‌ ಕಳಚಿ ಬಿದ್ದು ಭದ್ರತಾ ಸಿಬ್ಬಂದಿ ಸಾವು

Last Updated 19 ಜೂನ್ 2019, 20:21 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಜಾಲ ಸಮೀಪದಲ್ಲಿರುವ ‘ರಾಯಲ್ ಲೋಟಸ್’ ಹೋಟೆಲ್‌ ಮುಖ್ಯ ಪ್ರವೇಶ ದ್ವಾರದ ಗೇಟ್‌ ಕಳಚಿ ಬಿದ್ದು ಭದ್ರತಾ ಸಿಬ್ಬಂದಿ ನಿಗಮ್ ರಜಾಕ್ (22) ಎಂಬುವರು ಮೃತಪಟ್ಟಿದ್ದಾರೆ.

‘ಪಶ್ಚಿಮ ಬಂಗಾಳದ ನಿಗಮ್, ಎರಡು ತಿಂಗಳಿನಿಂದ ಹೋಟೆಲ್‌ ಕಾವಲು ಕೆಲಸ ಮಾಡುತ್ತಿದ್ದರು. ಮಂಗಳವಾರ ಮಧ್ಯಾಹ್ನ ಅವಘಡ ಸಂಭವಿಸಿದ್ದು, ತೀವ್ರ ಗಾಯಗೊಂಡಿದ್ದ ನಿಗಮ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ತೀರಿಕೊಂಡಿದ್ದಾರೆ’ ಎಂದು ಚಿಕ್ಕಜಾಲ ಪೊಲೀಸರು ಹೇಳಿದರು.

‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ನಿಗಮ್, ಸಾದರಹಳ್ಳಿ ಗೇಟ್‌ ಬಳಿ ಸ್ನೇಹಿತರ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಸೆಕ್ಯುರಿಟಿ ಏಜೆನ್ಸಿಯೊಂದರ ಮೂಲಕ ಹೋಟೆಲ್‌ನ ಕಾವಲಿಗೆ ನಿಯೋಜನೆಗೊಂಡಿದ್ದರು.’

‘ಮಂಗಳವಾರ ಮಧ್ಯಾಹ್ನ 2ರ ಸುಮಾರಿಗೆ ರಜಾಕ್, ಗೇಟ್‌ ಬಳಿ ನಿಂತಿದ್ದರು. ಅದೇ ವೇಳೆ ಸ್ಲೈಡ್ ಗೇಟ್ ದಿಢೀರನೇ ಕಳಚಿ ಅವರ ಮೇಲೆಯೇ ಬಿದ್ದಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಕುಸಿದು ಬಿದ್ದಿದ್ದ ಅವರನ್ನು ಸಹೋದ್ಯೋಗಿಗಳೇ ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಸರಿಯಾಗಿ ಗೇಟ್‌ ಅಳವಡಿಕೆ ಮಾಡಿರಲಿಲ್ಲ. ಅದೇ ಕಾರಣಕ್ಕೆ ಅದು ಕಳಚಿ ಬಿದ್ದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೋಟೆಲ್ ಮಂಡಳಿ ಹಾಗೂ ಗೇಟ್ ಜೋಡಿಸಿದ್ದ ವೆಲ್ಡರ್ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT