ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್ ಉದ್ಯಾನ: ನವೀಕೃತ ಪಾದಚಾರಿ ಮಾರ್ಗಗಳು ಸಜ್ಜು

‘ಸ್ಮಾರ್ಟ್‌ಸಿಟಿ’ ಯೋಜನೆಯ ಮೊದಲ ಹಂತದ ಕಾಮಗಾರಿ
Last Updated 28 ಜೂನ್ 2021, 21:44 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿಸ್ಮಾರ್ಟ್‌ಸಿಟಿ ಯೋಜನೆಯ ಮೊದಲ ಹಂತದಲ್ಲಿ ಕೈಗೆತ್ತಿಕೊಂಡಿದ್ದಪಾದಚಾರಿ ಮಾರ್ಗಗಳ ನವೀಕರಣ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಎರಡು ತಿಂಗಳಲ್ಲಿ ‘ಸ್ಮಾರ್ಟ್‌’ ಪಾದಚಾರಿ ಮಾರ್ಗಗಳು ಜನರನ್ನು ಸ್ವಾಗತಿಸಲಿವೆ.

ಮೊದಲ ಹಂತದಲ್ಲಿ ಪಾದಚಾರಿ ಮಾರ್ಗಗಳ ನಿರ್ಮಾಣ ಹಾಗೂ ನವೀಕರಣ ಕಾಮಗಾರಿ ಆರಂಭಿಸಲಾಗಿತ್ತು. ಕಳೆದ ವರ್ಷ ಲಾಕ್‌ಡೌನ್ ಜಾರಿಯಾದ ಕಾರಣ ಕಾಮಗಾರಿಗಳಿಗೆ ಅಡ್ಡಿಯಾಗಿತ್ತು. ಇತ್ತೀಚೆಗೆ ಕಾಮಗಾರಿಯ ವೇಗ ಹೆಚ್ಚಿದ್ದರಿಂದ ಶೀಘ್ರವೇ ನೂತನ ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರು ಸಂಚರಿಸಬಹುದು.

‘ಸ್ಮಾರ್ಟ್‌ಸಿಟಿ ಯೋಜನೆಯಡಿ ಕಬ್ಬನ್‌ ಉದ್ಯಾನವನ್ನು ಅಂದಗೊಳಿಸಲು ಹಲವು ಕಾಮಗಾರಿಗಳನ್ನು ಆರಂಭಿಸಿದ್ದೇವೆ. ಮೊದಲಿಗೆ ಉದ್ಯಾನದ ಪಾದಚಾರಿ ಮಾರ್ಗಗಳ ನವೀಕರಣ ಮಾಡಿದ್ದೇವೆ. ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ’ ಎಂದು ಸ್ಮಾರ್ಟ್‌ಸಿಟಿ ಯೋಜನೆಯ ಹಿರಿಯ ಅಧಿಕಾರಿಯೊಬ್ಬರುತಿಳಿಸಿದರು.

‘ಉದ್ಯಾನದಲ್ಲಿ ಈ ಹಿಂದೆ ನಿರ್ಮಿಸಲಾಗಿದ್ದ ಪಾದಚಾರಿ ಮಾರ್ಗಗಳು ಹಾಳಾಗಿದ್ದವು. ಅದನ್ನು ತೆರವುಗೊಳಿಸಿ ವಿವಿಧ ವಿನ್ಯಾಸಗಳಲ್ಲಿ ಮಾರ್ಗಗಳ ನವೀಕರಣಕ್ಕೆ ಯೋಜನೆ ರೂಪಿಸಲಾಗಿತ್ತು.ಸದ್ಯ ಹಡ್ಸನ್ ವೃತ್ತದಿಂದ ಸೆಂಚುರಿ ಕ್ಲಬ್‌ವರೆಗಿನ ಪಾದಚಾರಿ ಮಾರ್ಗ ಸಿದ್ಧವಾಗಿದೆ. ಉಳಿದ ಭಾಗಗಳಲ್ಲಿ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಮಾಹಿತಿ ನೀಡಿದರು.

ಆಮ್ಲಜನಕ ಸಮಸ್ಯೆಯಿಂದ ವಿಳಂಬ: ‘ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಆದರೆ, ಕೋವಿಡ್ ಎರಡನೇ ಅಲೆಯ ಪ್ರಭಾವದಿಂದ ಪಾದಚಾರಿ ಮಾರ್ಗಗಳ ನಿರ್ಮಾಣ ಆಮೆಗತಿಯಲ್ಲಿ ಸಾಗಿತು. ಮಾರ್ಗಗಳಿಗೆ ಆಧುನಿಕ ಶೈಲಿಯ ಗ್ರಾನೈಟ್‌ನ ಬಳಸಲಾಗುತ್ತಿದೆ. ಗ್ರಾನೈಟ್ ಅಳವಡಿಸುವಾಗ ‘ಫ್ಲೇಮಿಂಗ್’ ಪ್ರಕ್ರಿಯೆಗೆ ಆಮ್ಲಜನಕವನ್ನು ಪ್ರಧಾನವಾಗಿ ಬಳಸಲಾಗುತ್ತದೆ. ಎರಡನೇ ಅಲೆ ವೇಳೆ ಆಮ್ಲಜನಕಕ್ಕೆ ಹೆಚ್ಚು ಬೇಡಿಕೆ ಬಂದಿದ್ದರಿಂದ ಕಾಮಗಾರಿಗೆ ಅಗತ್ಯವಾದ ಆಮ್ಲಜನಕ ಲಭ್ಯವಾಗಲಿಲ್ಲ. ಇದರಿಂದ ಕಾಮಗಾರಿ ವಿಳಂಬವಾಯಿತು’ ಎಂದೂ ಅವರು ವಿವರಿಸಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ (ಕಬ್ಬನ್) ಎಚ್.ಟಿ.ಬಾಲಕೃಷ್ಣ,‘ಸ್ಮಾರ್ಟ್‌ಸಿಟಿ ಯೋಜನೆಯಡಿ ಸಿದ್ಧಗೊಳ್ಳುತ್ತಿರುವ ಪಾದಚಾರಿ ಮಾರ್ಗಗಳು ಉದ್ಯಾನದ ಅಂದ ಹೆಚ್ಚಿಸಲಿವೆ’ ಎಂದರು.

ವಾಯುವಿಹಾರ ಪಥ ಅಭಿವೃದ್ಧಿ
‘ಸ್ಮಾರ್ಟ್‌ಸಿಟಿ’ ಯೋಜನೆಯಡಿ ಉದ್ಯಾನದ ಒಳಭಾಗದಲ್ಲಿವಾಯುವಿಹಾರ ಪಥ ನಿರ್ಮಿಸಲಾಗುತ್ತಿದೆ. ಈ ಜಾಗದಲ್ಲಿದ್ದ ಪಥಗಳು ಹಾಳಾಗಿದ್ದವು. ಅವುಗಳನ್ನು ನವೀಕರಿಸಲಾಗಿದೆ ಹಾಗೂ ಕೆಲವೆಡೆ ಮಾರ್ಗಗಳನ್ನು ವಿಸ್ತರಿಸಲಾಗಿದೆ. ವಾಯುವಿಹಾರಿಗಳಿಗೆ ಅನುಕೂಲವಾಗುವಂತೆ ಸುಂದರವಾದ ಪಥ ನಿರ್ಮಾಣವಾಗುತ್ತಿದ್ದು, ಉದ್ಯಾನದ ರೂಪವೇ ಬದಲಾಗಲಿದೆ’ ಎಂದುಬಾಲಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT