ಗುರುವಾರ , ನವೆಂಬರ್ 26, 2020
21 °C

ಸ್ಮಾರ್ಟ್‌ ಪಾರ್ಕಿಂಗ್ ಹೆಸರಲ್ಲಿ ಹಗಲು ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಬಿಎಂಪಿಯು ‘ಸ್ಮಾರ್ಟ್‌ ಪಾರ್ಕಿಂಗ್‌’ ಶುಲ್ಕದ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿದೆ’ ಎಂದು ಹಿರಿಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಗರದ ಅಲಿ ಅಸ್ಕರ್ ರಸ್ತೆಯ ಉದ್ಯಾನದ ಬಳಿ ಸ್ಮಾರ್ಟಿಂಗ್‌ ಪಾರ್ಕಿಂಗ್‌ ಜಾಗದಲ್ಲಿಯೇ ಬುಧವಾರ ಸಂಜೆ ನಾನು ನನ್ನ ಕಾರನ್ನು ಸರಿಯಾಗಿ ನಿಲ್ಲಿಸಿದ್ದೆ. 50 ನಿಮಿಷ ಬಿಟ್ಟು ಬಂದ ನಂತರ, ನನ್ನ ವಾಹನಕ್ಕೆ ಕ್ಲ್ಯಾಂಪ್‌ ಹಾಕಲಾಗಿತ್ತು. ಒಂದು ತಾಸಿಗೆ ₹20 ನೀಡಬೇಕು ಎಂದರು. ನಾನು ಆ ಹಣವನ್ನು ನೀಡಲು ಮುಂದಾದಾಗ, ವಾಹನ ನಿಲ್ಲಿಸಿದ ತಕ್ಷಣವೇ ನೀವು ಟೋಕನ್‌ ತೆಗೆದುಕೊಳ್ಳಬೇಕಾಗಿತ್ತು. ಟೋಕನ್‌ ತೆಗೆದುಕೊಳ್ಳದ ಕಾರಣ ₹500 ದಂಡ ಕಟ್ಟಬೇಕು ಎಂದರು. ಒಟ್ಟು ₹520 ವಸೂಲಿ ಮಾಡಿದರು’ ಎಂದು ಹಿರಿಯ ನಾಗರಿಕ ಬಿ.ಎ. ಅನಂತರಾಮು ಹೇಳಿದರು.

‘ನಾನು ವಾಹನ ನಿಲ್ಲಿಸಿದ ಅವಧಿಗೆ ಎಷ್ಟು ಶುಲ್ಕ ಕಟ್ಟಬೇಕೋ ಅಷ್ಟು ಕಟ್ಟುತ್ತೇನೆ ಎಂದರೂ ಖಾಸಗಿ ಏಜನ್ಸಿಯ ಸಿಬ್ಬಂದಿ ಕೇಳಲಿಲ್ಲ. ಟೋಕನ್‌ ಪಡೆಯದೆ ಇದ್ದುದೇ ತಪ್ಪು ಎಂದಾದರೆ ₹100ವರೆಗೂ ಶುಲ್ಕ ವಿಧಿಸಲಿ. ಆದರೆ, ₹500 ವಸೂಲಿ ಮಾಡುವ ಮೂಲಕ ಬಿಬಿಎಂಪಿಯು ಹಗಲು ದರೋಡೆಗೆ ಇಳಿದಿದೆ’ ಎಂದೂ ಅವರು ದೂರಿದರು.

‘ಬಿಬಿಎಂಪಿಯ ಅಧಿಕಾರಿಗಳ ಬಳಿ ಈ ಬಗ್ಗೆ ವಿಚಾರಿಸಿದರೆ, ಸ್ಮಾರ್ಟ್‌ ಪಾರ್ಕಿಂಗ್‌ ನಿರ್ವಹಣೆಯ ಹೊಣೆಯನ್ನು ಖಾಸಗಿ ಏಜೆನ್ಸಿಗೆ ವಹಿಸಲಾಗಿದೆ ಎನ್ನುತ್ತಾರೆ. ಸಂಚಾರ ಪೊಲೀಸರ ಬಳಿಯೂ ಈ ಬಗ್ಗೆ ದೂರುವಂತಿಲ್ಲ. ಸುಮ್ಮನೆ ದಂಡ ಕಟ್ಟಿ ಹೋಗುವ ಪರಿಸ್ಥಿತಿ ಇದೆ. ಹಿರಿಯ ನಾಗರಿಕರಿಗೂ ಏಜೆನ್ಸಿಯ ಸಿಬ್ಬಂದಿ ವಿನಾಯಿತಿ ನೀಡುವುದಿಲ್ಲ’ ಎಂದು ಅವರು ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು