ಸ್ಮಗ್ಲರ್‌ಗಳು ಸೆರೆ; 2 ಕೆ.ಜಿ ಚಿನ್ನ ಜಪ್ತಿ

7

ಸ್ಮಗ್ಲರ್‌ಗಳು ಸೆರೆ; 2 ಕೆ.ಜಿ ಚಿನ್ನ ಜಪ್ತಿ

Published:
Updated:

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ಮೂವರು ಸ್ಮಗ್ಲರ್‌ಗಳನ್ನು ಬಂಧಿಸಿ, ಎರಡು ಕೆ.ಜಿ ಚಿನ್ನ ಜಪ್ತಿ ಮಾಡಿದ್ದಾರೆ.

‘ದುಬೈನಿಂದ ‘ಇವೈ–216’ ವಿಮಾನದಲ್ಲಿ ಬಂದ ಶಾಹಿದಾ ಬಾನು ಎಂಬ ಮಹಿಳೆಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಅವರ ಬಳಿ 796 ಗ್ರಾಂ ಚಿನ್ನದ ಪುಡಿ ಸಿಕ್ಕಿತು’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಶಾಹಿದಾ ಮುಂಬೈನವರು. ಚಿನ್ನದ ಪುಡಿ ಇದ್ದ ಪೊಟ್ಟಣವನ್ನು ಒಳ‍ ಉಡುಪಿನಲ್ಲಿ ಇಟ್ಟುಕೊಂಡು ಬಂದಿದ್ದರು. ತಪಾಸಣೆ ವೇಳೆ ಅವರ ವರ್ತನೆ ಸಂಶಯ ಮೂಡಿಸಿತು. ಮಹಿಳಾ ಸಿಬ್ಬಂದಿ ಕೊಠಡಿಗೆ ಕರೆದೊಯ್ದು ಪರಿಶೀಲಿಸಿದಾಗ ಒಳ ಉಡುಪಿನಲ್ಲಿ ಚಿನ್ನದ ಪುಡಿ ಪತ್ತೆಯಾಯಿತು.’

‘ಇದೇ ಶೈಲಿಯಲ್ಲಿ ಚಿನ್ನ ಸಾಗಿಸುತ್ತಿದ್ದ ಶಕೀನಾ ಶೇಖ್ ಎಂಬ ಮಹಿಳೆಯನ್ನು ಆ.2ರಂದು ಬಂಧಿಸಿ, 850 ಗ್ರಾಂ ಚಿನ್ನ ಜಪ್ತಿ ಮಾಡಿದ್ದೆವು. ಶಾಹಿದಾ ಹಾಗೂ ಶಕೀನಾ ಒಂದೇ ಜಾಲದ ಸದಸ್ಯರು ಇರಬಹುದು. ಆ ನಿಟ್ಟಿನಲ್ಲಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ಮತ್ತಿಬ್ಬರ ಸೆರೆ: ‘ಇಂಡಿಗೋ 6ಇ–96’ ವಿಮಾನದಲ್ಲಿ ಬಂದ ಮತ್ತಿಬ್ಬರು ಪ್ರಯಾಣಿಕರಿಂದ 1,204 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.

ಅವರಿಬ್ಬರೂ ತಮಿಳುನಾಡಿನವರಾಗಿದ್ದು, ಆಗಾಗ್ಗೆ ದುಬೈಗೆ ಹೋಗಿ ಬರುತ್ತಿದ್ದರು. ಅಲ್ಲಿಂದ ಚಿನ್ನ ತಂದು ಬೆಂಗಳೂರು ಹಾಗೂ ಸೇಲಂನಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !