ಭಾನುವಾರ, ಏಪ್ರಿಲ್ 5, 2020
19 °C

ಕೊರೊನಾ ಭೀತಿ: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ‘ವೃತ್ತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರ ಹೇಳುತ್ತಿದ್ದು, ಇದರ ಜಾರಿಗೆ ದಕ್ಷಿಣ ವಿಭಾಗದ ಪೊಲೀಸರು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.

ವಿಭಾಗದ ಪ್ರತಿಯೊಂದು ಠಾಣೆ ವ್ಯಾಪ್ತಿಯಲ್ಲಿರುವ ದಿನಸಿ ಹಾಗೂ ಇತರೆ ಅಗತ್ಯ ವಸ್ತುಗಳ ಅಂಗಡಿ ಎದುರು ವೃತ್ತಗಳನ್ನು ಹಾಕಲಾಗುತ್ತಿದೆ. ವೃತ್ತದಿಂದ ವೃತ್ತಕ್ಕೆ ಮೂರು ಅಡಿಯಷ್ಟು ಅಂತರವಿದೆ.

ಯಾರೇ ಸಾರ್ವಜನಿಕರು ಅಂಗಡಿಗಳಿಗೆ ಬಂದರೆ ವೃತ್ತದಲ್ಲೇ ನಿಲ್ಲಬೇಕು. ಸಾಲಾಗಿ ನಿಂತುಕೊಂಡು ಅಂಗಡಿಯೊಳಗೆ ಹೋಗಿ ವಸ್ತುಗಳನ್ನು ಖರೀದಿಸಬೇಕು.

ಆಯಾ ಠಾಣೆ ಪೊಲೀಸರೇ ಪ್ರತಿಯೊಂದು ಅಂಗಡಿಗೂ ಭೇಟಿ ನೀಡಿ ವೃತ್ತಗಳನ್ನು ಹಾಕಿಸುತ್ತಿದ್ದಾರೆ. ಆಕಸ್ಮಾತ್, ಮಳೆ ಬಂದು ವೃತ್ತ ಅಳಿಸಿ ಹೋದರೆ ಪುನಃ ವೃತ್ತ ಕೊರೆಯುವಂತೆಯೂ ಸೂಚಿಸುತ್ತಿದ್ದಾರೆ.

ಅಂಗಡಿ, ಮಳಿಗೆಗಳು, ಹಾಲಿನ ಕೇಂದ್ರಗಳು, ಹಣ್ಣು, ತರಕಾರಿ ಮಳಿಗೆ... ಹೀಗೆ ಪ್ರತಿ ಮಳಿಗೆಯಲ್ಲೂ ಸಾರ್ವಜನಿಕರು ಮೂರು ಅಡಿ ದೂರದಲ್ಲೇ ನಿಲ್ಲುತ್ತಿದ್ದಾರೆ.

‘ಇದೊಂದು ಒಳ್ಳೆಯ ಕೆಲಸ. ಸೋಂಕು ತಗುಲಿದ ವ್ಯಕ್ತಿಗಳು ಯಾರಾದರೂ ಬಂದರೂ ಬೇರೆಯವರಿಗೆ ತೊಂದರೆ ಆಗುವುದಿಲ್ಲ’ ಎಂದು ನಿವಾಸಿ ವಿರೇಶ್ ಹೇಳಿದರು.

ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸೆಪೆಟ್, 'ಯಾವುದೇ ಭಯಬೇಡ. ಎಲ್ಲರಿಗೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡೋಣ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳೋಣ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು