ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊನಾಲ್ಡೊ ಅವರನ್ನು ಹಿಂದಿಕ್ಕಿದ ಮೆಸ್ಸಿ

Last Updated 24 ಏಪ್ರಿಲ್ 2018, 18:34 IST
ಅಕ್ಷರ ಗಾತ್ರ

ಪ್ಯಾರಿಸ್‌: ಕ್ರಿಶ್ಚಿಯಾನೊ ರೊನಾಲ್ಡೊ ಅವರನ್ನು ಹಿಂದಿಕ್ಕಿದ ಲಯೊನೆಲ್ ಮೆಸ್ಸಿ ವಿಶ್ವ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಗಳಿಕೆ ಹೊಂದಿರುವ ಆಟಗಾರ ಎನಿಸಿದ್ದಾರೆ. ಫ್ರಾನ್ಸ್‌ನ ಫುಟ್‌ಬಾಲ್ ನಿಯತಕಾಲಿಕವೊಂದು ಇದನ್ನು ವರದಿ ಮಾಡಿದೆ.

ಅರ್ಜೆಂಟೀನಾ ಮತ್ತು ಬಾರ್ಸಿಲೋನಾ ತಂಡದಲ್ಲಿ ಆಡುತ್ತಿರುವ ಮೆಸ್ಸಿ ಅವರ ಗಳಿಕೆ ₹ 1020 ಕೋಟಿಗೆ ಏರಿದ್ದು ಪೋರ್ಚುಗಲ್‌ ಮತ್ತು ರಿಯಲ್‌ ಮ್ಯಾಡ್ರಿಡ್ ಪರ ಆಡುತ್ತಿರುವ ರೊನಾಲ್ಡೊ ಗಳಿಕೆ ₹ 760 ಕೋಟಿಯಾಗಿಯೇ ಉಳಿದಿದೆ.

ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್‌ನ ನೇಮರ್‌ ಅವರ ಗಳಿಕೆ ₹ 660 ಕೋಟಿ. ₹ 350 ಕೋಟಿ ಗಳಿಕೆ ಇರುವ ವೇಲ್ಸ್‌ ಆಟಗಾರ ಗರೆಥ್‌ ಬೇಲ್‌ ನಾಲ್ಕನೇ ಮತ್ತು ₹ 230 ಕೋಟಿ ಗಳಿಕೆಯ ಸ್ಪೇನ್‌ನ ಜೆರಾಲ್ಡ್‌ ಪೀಕ್‌ ಐದನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT