ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕ
ರಣದ ಮರು ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರ ಮತ್ತು ಸಿಬಿಐಗೆ ಉತ್ತರ ನೀಡಲು ನಿರ್ದೇಶನ ನೀಡಿರುವುದನ್ನು ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್ (ಎನ್ಎಫ್ಐಡಬ್ಲ್ಯು) ರಾಜ್ಯ ಸಮಿತಿ ಸ್ವಾಗತಿಸಿದೆ.

ಬಾಲಕಿ ಸೌಜನ್ಯ ಪ್ರಕರಣದ ಮರುತನಿಖೆಗೆ ಕೋರಿ ಆಕೆಯ ತಾಯಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿ ನಿರ್ದೇಶನ ನೀಡಿರುವುದು ಕಗ್ಗತ್ತಲ
ಲ್ಲಿರುವ ನಮಗೆ ಕೊಂಚ ಬೆಳಕಿನ ಆಶಾಕಿರಣ ಮೂಡಿಸಿದೆ. ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಉತ್ತರ ನೀಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮರುತನಿಖೆಯಿಂದ ಹಿಂದೆ ಸರಿಯಬಾರದು ಹಾಗೂ ಸಾಕ್ಷ್ಯಗಳಿಲ್ಲ ಎಂಬಂತಹ ಸುಳ್ಳು ನೆಪಗಳನ್ನು ನೀಡಬಾರದು ಎಂದು ಎನ್ಎಫ್ಐಡಬ್ಲ್ಯು ಅಧ್ಯಕ್ಷೆ ಎ.ಜ್ಯೋತಿ ತಿಳಿಸಿದ್ದಾರೆ.

ಎಸ್ಐಟಿ ಎಲ್ಲಾ ರೀತಿಯ ಸಹಕಾರ ನೀಡಿ, ನೊಂದ ಮಹಿಳೆಯರಿಗೆ ಮತ್ತು ಅಮಾಯಕರಿಗೆ ನ್ಯಾಯ ಒದಗಿಸಬೇ ಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.