ಗುರುವಾರ , ಜೂಲೈ 9, 2020
21 °C

ಕೊರೊನಾ ರಕ್ಷಣೆಗೆ ಹೊಸ ಸಮವಸ್ತ್ರ ತೊಟ್ಟ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ದಕ್ಷಿಣ ವಿಭಾಗದ ಪೊಲೀಸರು ಕೊರೊನಾ ವೈರಾಣುವಿನಿಂದ ರಕ್ಷಣೆ ನೀಡುವ ಹೊಸ ಸಮವಸ್ತ್ರ ಧರಿಸಲು ಸಜ್ಜಾಗಿದ್ದಾರೆ.

ಖಾಕಿ ಬಣ್ಣದ ಬಟ್ಟೆಯಿಂದಲೇ ಸಮವಸ್ತ್ರ ಸಿದ್ಧಪಡಿಸಲಾಗಿದ್ದು, ಇದು ದೇಹದ ಸಂಪೂರ್ಣ ಭಾಗವನ್ನು ಮುಚ್ಚಿಕೊಳ್ಳಲು ಅನುಕೂಲವಾಗುತ್ತದೆ. ಇದರ ಜೊತೆಯಲ್ಲೇ ಮಾಸ್ಕ್‌, ಕೈಗವಸು ಹಾಗೂ ಮುಖಕವಚ ಹಾಕಿಕೊಳ್ಳಲು ಅವಕಾಶವಿದೆ.

ಪ್ರಾಯೋಗಿಕವಾಗಿ ಸಿದ್ಧಪಡಿಸಿರುವ ಸಮವಸ್ತ್ರದ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸೆಫೆಟ್, ‘ನಿಯಂತ್ರಿತ ಪ್ರದೇಶ (ಕಂಟೈನ್‌ಮೆಂಟ್), ಠಾಣೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಾಗಿ ಈ ಸಮವಸ್ತ್ರ ಸಿದ್ಧಪಡಿಸಲಾಗಿದೆ. ಇದು ಕೊರೊನಾ ವೈರಾಣು ತಗಲುವುದರಿಂದ ರಕ್ಷಣೆ ನೀಡಲಿದೆ’ ಎಂದರು.

ಠಾಣೆಯಲ್ಲೂ ಗಾಜಿನ ಕೌಂಟರ್: ದಕ್ಷಿಣ ವಿಭಾಗದ ಬಹುತೇಕ ಠಾಣೆಗಳಲ್ಲಿ ಗಾಜಿನ ಕೌಂಟರ್‌ಗಳನ್ನು ನಿರ್ಮಿಸಲಾಗಿದೆ. ಠಾಣಾಧಿಕಾರಿಯು ಕೌಂಟರ್‌ ಒಳಗೆ ಕುಳಿತು ಸಾರ್ವಜನಿಕರ ದೂರು ಪಡೆಯುವ ವ್ಯವಸ್ಥೆ ಮಾಡಲಾಗಿದೆ.

‘ಸಾರ್ವಜನಿಕರು ನಿತ್ಯವೂ ಠಾಣೆಗೆ ಬರುತ್ತಾರೆ. ಅವರ ಬಗ್ಗೆ ಸಿಬ್ಬಂದಿಯಲ್ಲೂ ಆತಂಕವಿರುತ್ತದೆ. ಹೀಗಾಗಿ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಹೊಸದಾಗಿ ಕೌಂಟರ್‌ಗಳನ್ನು ನಿರ್ಮಿಸಲಾಗಿದೆ. ಮಾತನಾಡಲು ಮೈಕ್ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದು ರೋಹಿಣಿ ಸೆಫೆಟ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.