ಜಯನಗರ ಪ್ಲಾಸ್ಟಿಕ್ ಮುಕ್ತ ಮಾಡುವೆ: ಶಾಸಕಿ ಸೌಮ್ಯ ರೆಡ್ಡಿ

7

ಜಯನಗರ ಪ್ಲಾಸ್ಟಿಕ್ ಮುಕ್ತ ಮಾಡುವೆ: ಶಾಸಕಿ ಸೌಮ್ಯ ರೆಡ್ಡಿ

Published:
Updated:
Deccan Herald

ಬೆಂಗಳೂರು: ‘ಜಯನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ’ ಎಂದು ಶಾಸಕಿ ಸೌಮ್ಯ ರೆಡ್ಡಿ ತಿಳಿಸಿದರು.

ಜಯನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಪ್ಲಾಸ್ಟಿಕ್‌ ಇಲ್ಲದಂತೆ ಮಾಡಲು ಎಷ್ಟೇ ಕ್ರಮ ವಹಿಸಿದರೂ ಸಾರ್ವಜನಿಕರ ಸಹಕರ ಇರದಿದ್ದರೆ ಯಾವುದೂ ಸಾಧ್ಯವಾಗುವುದಿಲ್ಲ’ ಎಂದರು.

‘ಜಯನಗರ ಅಭಿವೃದ್ಧಿ ಹೊಂದಿದ ಬಡಾವಣೆ. ಇದನ್ನು ಮತ್ತಷ್ಟು ಸ್ವಚ್ಛವಾಗಿಟ್ಟು, ಮಾದರಿ ಬಡಾವಣೆ ಮಾಡುವ ಉದ್ದೇಶ ನನ್ನದು. ಅದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸುವೆ. ಅವರು ಈ ಪ್ರದೇಶದ ಪ್ರತಿ ಅಂಗಡಿಗಳಿಗೂ ಭೇಟಿ ನೀಡಿ, ಪ್ಲಾಸ್ಟಿಕ್‌ನಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಿ, ಪ್ಲಾಸ್ಟಿಕ್ ಬಳಸದಿರಲು ಮನವರಿಕೆ ಮಾಡುತ್ತಾರೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !