ಬೆಂಗಳೂರು: ಸ್ಪರ್ಶ್ ಆಸ್ಪತ್ರೆಗಳ ಸಮೂಹವು ‘ಲೈಫ್-ಕೋರ್ಸ್ ವ್ಯಾಕ್ಸಿನೇಷನ್’ (ಎಲ್ಸಿವಿ) ಕಾರ್ಯಕ್ರಮದಡಿ ರೋಗ ನಿರೋಧಕ ಲಸಿಕೆ ವಿತರಣೆ ಪ್ರಾರಂಭಿಸಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆ ಅಧ್ಯಕ್ಷ ಡಾ. ಶರಣ್ ಶಿವರಾಜ್ ಪಾಟೀಲ, ‘ನಗರದಲ್ಲಿ ಈ ಲಸಿಕೆಯನ್ನು ಇದೇ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ರೋಗ ನಿರೋಧಕ ಶಕ್ತಿ ವೃದ್ಧಿಗೆ ಇದು ಸಹಕಾರಿಯಾಗಿದ್ದು, ಮಕ್ಕಳು ಹಾಗೂ ವಯಸ್ಕರಿಗೆ ಒದಗಿಸಲಾಗುತ್ತದೆ. ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಶಾಖೆಯಲ್ಲಿ ಈ ಲಸಿಕೆ ವಿತರಿಸಲಾಗುತ್ತದೆ. ಲಸಿಕೆ ತಯಾರಿಕಾ ಸಂಸ್ಥೆ ಝೈಡಸ್ ಸಹಯೋಗದಲ್ಲಿ ಹಂತ ಹಂತವಾಗಿ ಉಳಿದ ಶಾಖೆಗಳಿಗೂ ವಿಸ್ತರಿಸಲಾಗುತ್ತದೆ’ ಎಂದು ಹೇಳಿದರು.

‘ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹೃದಯ ರಕ್ತನಾಳದ ಕಾಯಿಲೆಗಳು, ಮಧುಮೇಹ ಮತ್ತು ಕ್ಯಾನ್ಸರ್ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚಾಗಿ ಮರಣಕ್ಕೆ ಕಾರಣವಾಗುತ್ತಿವೆ. ತೀವ್ರವಾಗಿ ಹರಡುವ ವಿಷಮಶೀತ ಜ್ವರ ಮತ್ತು ನ್ಯುಮೋನಿಯಾದಂತಹ ಸಾಂಕ್ರಾಮಿಕ ರೋಗಗಳು ದುರ್ಬಲ ರೋಗ ನಿರೋಧಕಶಕ್ತಿ ಹೊಂದಿದ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಈ ಲಸಿಕೆ ಅಭಿವೃದ್ಧಿಪಡಿಸಲಾಗಿದ್ದು, ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿಯಾಗಲಿದೆ’ ಎಂದು ವಿವರಿಸಿದರು.

ಆಸ್ಪತ್ರೆಯ ಹಿರಿಯ ಸಮಾಲೋಚಕ ಡಾ. ರಂಜನ್ ಶೆಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.