ಸೋಮವಾರ, ಸೆಪ್ಟೆಂಬರ್ 20, 2021
22 °C

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆ್ಯಪ್ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಿಫೈನಿಂಗ್‌ ಸ್ಕಿಲ್ಸ್‌ ಅಕಾಡೆಮಿಯು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಮೊಬೈಲ್ ಆ್ಯಪ್‌ ಒಂದನ್ನು ಅಭಿವೃದ್ಧಿ ಪಡಿಸಿದೆ. ಹತ್ತನೇ ತರಗತಿಯ ಎಲ್ಲ ಆರು ವಿಷಯಗಳಿಗೆ ಸಂಬಂಧಿಸಿದ ವಿಭಾಗಗಳನ್ನು ಒಳಗೊಂಡಿರುವ ಈ ಆ್ಯಪ್‌ಗೆ ‘ಎಸ್ಸೆಸ್ಸೆಲ್ಸಿ ಕನೆಕ್ಟ್‌’ (SSLC CONNECT) ಎಂದು ಹೆಸರಿಡಲಾಗಿದೆ.

ನೋಡಿ, ಓದಿ ಮತ್ತು ಅಭ್ಯಾಸ ಮಾಡಿ ಕಲಿಯುವಂತಹ, ಪರೀಕ್ಷೆ ಮತ್ತು ಮಕ್ಕಳ ಬೆಳವಣಿಗೆಗೆ ಪೂರಕವಾದ ಅಂಶಗಳು ಇದರಲ್ಲಿ ಇದ್ದು, ಲೈವ್‌ ವಿಡಿಯೊಗಳೂ ಲಭ್ಯ ಇವೆ.

ಎಲ್ಲ ವಿಷಯಗಳ ಪ್ರತಿ ಅಧ್ಯಾಯಕ್ಕೆ ಸಂಬಂಧಿಸಿದ ಮಾಹಿತಿ, ಪಠ್ಯಪುಸ್ತಕದ ವಿವರ, ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳು ಇದರಲ್ಲಿ ಇವೆ. ಮೊಬೈಲ್‌ ಪ್ಲೇ ಸ್ಟೋರ್‌ನಲ್ಲಿ ಈ SSLC CONNECT ಆ್ಯಪ್‌ ಉಚಿತವಾಗಿ ಲಭ್ಯ ಇದೆ ಎಂದು ಅಕಾಡೆಮಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು