ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನ ಪತ್ರಿಕೆ ವಿತರಕರ ನೆರವಿಗೆ ದಾವಿಸಿದ ಸಚಿವ ಎಸ್.ಟಿ‌. ಸೋಮಶೇಖರ್

Last Updated 9 ಏಪ್ರಿಲ್ 2020, 12:55 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ದಿನ ಪತ್ರಿಕೆ ವಿತರಕರಿಗೆಸಹಕಾರ ಸಚಿವ ಎಸ್.ಟಿ‌.ಸೋಮಶೇಖರ್ ಅವರುದಿನಸಿ ಕಿಟ್ ಹಾಗೂ ಮಾಸ್ಕ್‌ಗಳನ್ನು ವಿತರಿಸಿದರು.

ಯಶವಂತಪುರ ವ್ಯಾಪ್ತಿಗೆ ಒಳಪಡುವ ಏರೋಹಳ್ಳಿ ವಾರ್ಡ್‌ನಅಂಜನಾನಗರ, ಮುದ್ದನಪಾಳ್ಯ, ಬಿಇಎಲ್ ಬಡಾವಣೆ, ಬ್ಯಾಡರಹಳ್ಳಿ, ಕೆಂಪೇಗೌಡ ನಗರ, ಬಾಲಾಜಿನಗರ, ತುಂಗಾನಗರ, ಹೇರೋಹಳ್ಳಿ, ವೆಂಕಟೇಶ್ವರ ಲೇಔಟ್, ಮಹದೇಶ್ವರ ನಗರ, ಕೆಎಸ್ಆರ್‌ಟಿಸಿಬಡಾವಣೆಯ ಎಲ್ಲಾ ಪತ್ರಿಕಾ ವಿತರಕರಿಗೆಅಗತ್ಯ ಇರುವಷ್ಟು ಮಾಸ್ಕ್‌ಗಳನ್ನುನೀಡಲಾಯಿತು.

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಲಾಕ್‌ಡೌನ್‌ಜಾರಿಯಾಗಿದೆ. ಇಂತಹ ಸಂದರ್ಭದಲ್ಲೂ ಜನರಿಗೆ ವಿಶ್ವಾಸಾರ್ಹ ಸುದ್ದಿಗಳನ್ನು ತಲುಪಿಸುತ್ತಿರುವ ಪತ್ರಿಕೆಗಳ ಪಾತ್ರ ಅತ್ಯಗತ್ಯವಾಗಿದೆ. ಸರ್ಕಾರದ ಆದೇಶಗಳು,ಕೊರೊನಾ ತಡೆಗಟ್ಟುವಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತಂತೆ ಪತ್ರಿಕೆಗಳು ಓದುಗರಿಗೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿವೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಲಾಕ್‌ಡೌನ್‌ಜಾರಿ ಇರುವುಷ್ಟು ದಿನ ಪತ್ರಿಕೆಗಳ ವಿತರಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುತ್ತಿರುವ ಹುಡುಗರಿಗೆ ಕೊರೊನಾ ಸೋಂಕಿನಿಂದ ರಕ್ಷಣೆಗೆ ಅಗತ್ಯ ಇರುವ ಮಾಸ್ಕ್‌ಗಳನ್ನು ನೀಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಹ ಲಾಕ್‌ಡೌನ್‌ಹಿನ್ನೆಲೆಯಲ್ಲಿ ಬಡವರು, ಕಾರ್ಮಿಕರ ಜೀವನ ನಿರ್ವಹಣೆಗೆ ಅಗತ್ಯ ಇರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT