ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಗೀತೆಯಲ್ಲಿ ಮೊದಲ-ಕೊನೆಯ ಚರಣ ಸಾಕು: ಕಮಲಾ ಹಂಪನಾ

Last Updated 1 ನವೆಂಬರ್ 2019, 5:52 IST
ಅಕ್ಷರ ಗಾತ್ರ

ಬೆಂಗಳೂರು: ಕುವೆಂಪು ರಚಿತ ನಾಡಗೀತೆ ದೀರ್ಘವಾಗಿದೆ. ಅದರ ಮೊದಲ ಮತ್ತು ಕೊನೆಯ ಚರಣ ಮಾತ್ರ ಉಳಿಸಿಕೊಂಡು ನಾಡಗೀತೆ ಹಾಡುವಂತಾಗಬೇಕು ಎಂದು ಕಮಲಾ ಹಂಪನಾ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಸಪ್ನ ಬುಕ್ ಹೌಸ್ ವತಿಯಿಂದ ಹಮ್ಮಿಕೊಂಡಿರುವ 'ಓದು ಜನುಮೇಜಯ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಕುವೆಂಪು ಅವರ ಬಗ್ಗೆ ಸಂಪೂರ್ಣ ಗೌರವ ಇಟ್ಟುಕೊಂಡೇ ಈ ಮಾತು ಹೇಳುತ್ತಿದ್ದೇನೆ‌. ಈ ನಿಟ್ಟಿನಲ್ಲಿ ಠರಾವು ಒಂದನ್ನು ಅಂಗೀಕರಿಸಬೇಕು' ಎಂದು ಅವರು ಸಭೆಯನ್ನು ಒತ್ತಾಯಿಸಿದರು.

'ನಾನು ಹಲವು ದೇಶಗಳನ್ನು ಸುತ್ತಿದ್ದೇನೆ‌. ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ‌. ರಾಜ್ಯ ಅಥವಾ ದೇಶದಲ್ಲಿ ನಾಡಗೀತೆ ಇಷ್ಟು ದೀರ್ಘವಾಗಿಲ್ಲ' ಎಂದರು.

ಕಮಲಾ ಅವರ ಮಾತಿಗೆ ಕೆಲವು ಸಭಿಕರು ವಿರೋಧ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT