ಬೆಂಗಳೂರು: ಗಂಭೀರ ಅಪ್ಲಾಸ್ಟಿಕ್ ರಕ್ತಹೀನತೆಯಿಂದ ಬಳಲುತ್ತಿದ್ದ ಯುವಕನೊಬ್ಬನಿಗೆ ಅಪರಿಚಿತ ಮಹಿಳೆಯೊಬ್ಬರು ರಕ್ತದ ಆಕರ ಕೋಶ ದಾನ ಮಾಡುವ ಮೂಲಕ ಚೇತರಿಕೆಗೆ ನೆರವಾಗಿದ್ದು ಮೂರು ವರ್ಷಗಳ ಬಳಿಕ ಡಿಕೆಎಂಎಸ್ ಫೌಂಡೇಷನ್ ನೆರವಿನಿಂದ ಈ ಇಬ್ಬರೂ ನಗರದಲ್ಲಿ ಗುರುವಾರ ಮುಖಾಮುಖಿಯಾದರು.

19 ವರ್ಷದ ಆನಂದ್ ಅವರು ತೀವ್ರ ಅಪ್ಲಾಸ್ಟಿಕ್ ರಕ್ತಹೀನತೆಯಿಂದ ಚೇತರಿಸಿಕೊಂಡು ಕಾಲೇಜಿಗೆ ಹೋಗುತ್ತಿದ್ದಾರೆ. ಅವರಿಗೆ ಬೆಂಗಳೂರಿನ 31 ವರ್ಷದ ಐಟಿ ಉದ್ಯೋಗಿ ಸ್ವಾತಿ ಎನ್ನುವವರು 2023ರಲ್ಲಿ ರಕ್ತದ ಆಕರ ಕೋಶ ದಾನ ಮಾಡಿದ್ದರು. ಈ ಇಬ್ಬರೂ ಇದೇ ಮೊದಲ ಬಾರಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೇಟಿಯಾದರು.

‘ಆನಂದ್ ಅವರು 15 ವರ್ಷದವರಿದ್ದಾಗ ಗಂಭೀರ ಸ್ವರೂಪದ ಅಪ್ಲಾಸ್ಟಿಕ್ ರಕ್ತಹೀನತೆಯಿಂದ ಬಳಲುತ್ತಿರುವುದು ತಪಾಸಣೆ ವೇಳೆ ದೃಢಪಟ್ಟಿತ್ತು. ಕೋವಿಡ್-19 ಲಸಿಕೆ ಪಡೆದ ನಂತರ ಅವರಿಗೆ ನಿರಂತರ ಜ್ವರ ಕಾಡಲಾರಂಭಿಸಿತು. ಅಪ್ಲಾಸ್ಟಿಕ್ ರಕ್ತಹೀನತೆಯು ಸಾವಿಗೆ ಕಾರಣವಾಗಬಹುದಾದ ಮಾರಕ ಸಮಸ್ಯೆಯಾಗಿದೆ. ಕಾಂಡಕೋಶ ಕಸಿ ಒಂದೇ ಪರಿಹಾರವಾಗಿತ್ತು. ಅವರಿಗೆ ಹೊಂದಿಕೆಯಾಗುವ ಕಾಂಡಕೋಶ ಹುಡುಕುವುದು ಸವಾಲಾಗಿತ್ತು. ಇದರಿಂದ ಅವರ ಕುಟುಂಬವು ಭಾವನಾತ್ಮಕ ಹಾಗೂ ಆರ್ಥಿಕ ಒತ್ತಡ ಎದುರಿಸಿತು’ ಎಂದು ಚಿಕಿತ್ಸೆ ಒದಗಿಸಿದ ಬಿಎಂಟಿ ಆ್ಯಂಡ್ ಎಂವಿಆರ್ ಕ್ಯಾನ್ಸರ್ ಸೆಂಟರ್ನ ಡಾ.ವಿ.ಕೃಷ್ಣನ್ ತಿಳಿಸಿದರು.

ಸ್ವಾತಿ ಅವರು 2016ರಲ್ಲಿ ಡಿಕೆಎಂಎಸ್ ನಡೆಸಿದ ರಕ್ತದ ಆಕರ ಕೋಶ ದಾನಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ತಮ್ಮ ಹೆಸರು ನೋಂದಾಯಿಸಿದ್ದರು.

‘2022ರಲ್ಲಿ ಡಿಕೆಎಂಎಸ್ನಿಂದ ದೂರವಾಣಿ ಕರೆ ಬಂದಿತು. ಯಾವುದೇ ಯೋಚನೆ ಮಾಡದೆ ರಕ್ತದ ಆಕರ ಕೋಶ ದಾನಕ್ಕೆ ಒಪ್ಪಿಗೆ ಸೂಚಿಸಿದೆ. ಕುಟುಂಬದ ಸದಸ್ಯರು ಬೆಂಬಲ ಸೂಚಿಸಿದರು’ ಎಂದು ಸ್ವಾತಿ ಹೇಳಿದರು.

ಫೌಂಡೇಷನ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ಯಾಟ್ರಿಕ್ ಪಾಲ್, ‘ರಕ್ತದ ಕ್ಯಾನ್ಸರ್ ಹಾಗೂ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರಕೋಶ ಸಹಾಯಕ. ಆರೋಗ್ಯವಂತ ವ್ಯಕ್ತಿಗಳು ರಕ್ತದ ಆಕರಕೋಶ ದಾನ ಮಾಡುವ ಮೂಲಕ ರೋಗಿಗಳ ಚೇತರಿಕೆಗೆ ನೆರವಾಗಬೇಕು. ರಾಜ್ಯದಲ್ಲಿ 49 ಸಾವಿರಕ್ಕೂ ಹೆಚ್ಚು ಜನರು ರಕ್ತದ ಆಕರಕೋಶ ದಾನಕ್ಕೆ ಹೆಸರು ನೋಂದಾಯಿಸಿದ್ದಾರೆ. ಇವರಲ್ಲಿ 38 ಸಾವಿರ ಮಂದಿ ಬೆಂಗಳೂರಿನಲ್ಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.