ಬೆಂಗಳೂರು: ನಗರದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ, ₹6.5 ಲಕ್ಷ ಮೌಲ್ಯದ ₹ 21 ವಾಹನ ವಶಪಡಿಸಿಕೊಂಡಿದ್ದಾರೆ.

ನಗರದ ನಿವಾಸಿಗಳಾದ ಗೋವಿಂದ ರಾಜ್ (49) ಹಾಗೂ ಪ್ರಭು (29) ಅವರನ್ನು ಬಂಧಿಸಿ, ₹ 6.5 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಠಾಣಾ ವ್ಯಾಪ್ತಿಯ 15ನೇ ಮುಖ್ಯ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಗಣೇಶ ಮೆರವಣಿಗೆ ನೋಡಲು ಹೋಗಿದ್ದ ವ್ಯಕ್ತಿ ವಾಪಸ್ ಬಂದು ನೋಡಿದಾಗ ಕಳ್ಳತನವಾಗಿತ್ತು. ಪ್ರಕರಣ ದಾಖಲಿಸಿಕೊಂಡು ಬಾತ್ಮಿದಾರರ ಮಾಹಿತಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಗೊರಗುಂಟೆ ಪಾಳ್ಯದ ತಾಜ್ ಹೋಟೆಲ್ ಬಳಿ ವಾಹನ ಸಮೇತ ಆರೋಪಿಯನ್ನು ವಶಕ್ಕೆ ಪಡೆದುಕೊಂಡರು.

‘ವಿಚಾರಣೆ ವೇಳೆ ನಗರದ ಹಲವು ಕಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿ ಗೋವಿಂದರಾಜ್ ನೀಡಿದ ಮಾಹಿತಿ ಆಧರಿಸಿ ನಂದಿನಿ ಲೇಔಟ್ನ ಜೈ ಮಾರುತಿನಗರದ ಮನೆಯೊಂದರ ಬಳಿ ನಿಲ್ಲಿಸಿದ್ದ ಎಂಟು ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಕಳವು ಮಾಡಿದ್ದ ವಾಹನಗಳನ್ನು ತನ್ನ ಸ್ನೇಹಿತ ಪ್ರಭುವಿಗೆ ನೀಡಿರುವುದಾಗಿ ತಿಳಿಸಿದ. ಆತನನ್ನು ವಶಕ್ಕೆ ಪಡೆದು ನಂದಿನಿ ಲೇಔಟ್ ಎರಡನೇ ಬ್ಲಾಕ್ ನಲ್ಲಿರುವ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಏಳು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು’ ಎಂದು ಹೇಳಿದ್ದಾರೆ.

‘ಐದು ದ್ವಿಚಕ್ರ ವಾಹನವನ್ನು ಸಾರ್ವಜನಿಕರಿಗೆ ಮಾರಾಟ ಮಾಡಿರುವುದಾಗಿ ಆರೋಪಿ ತಿಳಿಸಿದ. ವಾಹನಗಳನ್ನು ಖರೀದಿಸಿದವರಿಗೆ ನೋಟಿಸ್ ನೀಡಲಾಯಿತು. ಅವರೆಲ್ಲರೂ ವಾಹನವನ್ನು ಠಾಣೆಗೆ ಒಪ್ಪಿಸಿದರು. ಆರೋಪಿಗಳ ಬಂಧನದಿಂದ 12 ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿದೆ. ಉಳಿದ 9 ವಾಹನಗಳ ವಾರಸುದಾರರ ಪತ್ತೆ ಕಾರ್ಯ ಪ್ರಗತಿಯಲ್ಲಿದ್ದು, ತನಿಖೆ ಮುಂದುವರಿದಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.