ಶಾಲೆ ಆವರಣದಲ್ಲೇ ವಿದ್ಯಾರ್ಥಿ ಸಾವು

7

ಶಾಲೆ ಆವರಣದಲ್ಲೇ ವಿದ್ಯಾರ್ಥಿ ಸಾವು

Published:
Updated:

ಬೆಂಗಳೂರು: ಮಾದನಾಯಕನಹಳ್ಳಿ ಸಮೀಪದ ಗಂಗೊಂಡನಹಳ್ಳಿಯ ನ್ಯೂ ಆಕ್ಸ್‌ಫರ್ಡ್‌ ಶಾಲೆ ಆವರಣದಲ್ಲಿ ನಿರಂಜನ್ (13) ಎಂಬಾತ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ.

ಸ್ಥಳೀಯ ನಿವಾಸಿ ಬಸವರಾಜ್ ಎಂಬುವರ ಪುತ್ರನಾದ ನಿರಂಜನ್, 8ನೇ ತರಗತಿಯಲ್ಲಿ ಓದುತ್ತಿದ್ದ. ಗುರುವಾರ ಬೆಳಿಗ್ಗೆ 5 ಗಂಟೆಗೆ ಶಾಲೆಗೆ ಹೋಗಿದ್ದ. 7 ಗಂಟೆ ಸುಮಾರಿಗೆ ಶಾಲೆಯ ಆವರಣದಲ್ಲೇ ಆತನ ಶವ ಪತ್ತೆಯಾಗಿದೆ. ಆತನ ಸಾವಿಗೆ ಕಾರಣ  ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದರು.

‘ನಿರಂಜನ್‌ ಹಾಗೂ ಆತನ ಸ್ನೇಹಿತ, ನಿತ್ಯವೂ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದರು. ಆ ಸ್ನೇಹಿತ ಇತ್ತೀಚೆಗಷ್ಟೇ ತೀರಿಕೊಂಡಿದ್ದಾನೆ. ಆ ಘಟನೆಯಿಂದ ನಿರಂಜನ್‌, ಖಿನ್ನತೆಗೆ ಒಳಗಾಗಿದ್ದನೆಂದು ತಿಳಿದುಬಂದಿದೆ‘ ಎಂದರು.

‘ಶಾಲೆಯ ಮಹಡಿ ಮೇಲೆ ನಿರಂಜನ್ ಹೋಗುತ್ತಿದ್ದದ್ದನ್ನು ಸ್ಥಳೀಯರೊಬ್ಬರು ನೋಡಿದ್ದಾರೆ. ವಿಶೇಷ ತರಗತಿ ಇರಬಹುದು ಎಂದು ಸುಮ್ಮನಾಗಿದ್ದಾರೆ. ಶಾಲೆಗೆ ಬಂದಿದ್ದ ಕೆಲಸಗಾರನೊಬ್ಬ, ಆತನ ಶವ ನೋಡಿ ಠಾಣೆಗೆ ಮಾಹಿತಿ ನೀಡಿದ್ದ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !