ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಪನ್‌ ಸ್ಕೂಲ್‌ನಲ್ಲಿ ಓದಿದ ವಿದ್ಯಾರ್ಥಿಗೆ ರ‍್ಯಾಂಕ್

Last Updated 17 ಮಾರ್ಚ್ 2021, 19:48 IST
ಅಕ್ಷರ ಗಾತ್ರ

ಬೆಂಗಳೂರು: ದಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್‌ನಲ್ಲಿ (ಎನ್‌ಐಒಎಸ್‌) ಓದಿದ ನಗರದ ಮಯಾಂಕ್‌ ಫಂಡರಿ ಕಿಶೋರ್‌ ವೈಜ್ಞಾನಿಕ ಪ್ರೋತ್ಸಾಹ ಯೋಜನಾ (ಕೆವಿಪಿವೈ) ಪರೀಕ್ಷೆಯಲ್ಲಿ ದೇಶಕ್ಕೆ 648ನೇ ರ್‍ಯಾಂಕ್ ಪಡೆದಿದ್ದಾನೆ.

17 ವರ್ಷದ ಮಯಾಂಕ್‌ ತೆರೆದ ಶಾಲೆಯಲ್ಲಿ (ಓಪನ್‌ ಸ್ಕೂಲ್‌) ಅಂದರೆ, ಶಾಲೆಗೆ ಹೋಗದೆ ಓದಿ ಈ ಸಾಧನೆ ಮಾಡಿದ್ದಾನೆ.

ಕೆವಿಪಿವೈ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಫೆಲೋಷಿಪ್ ನೀಡಲಾಗುತ್ತದೆ. ದೇಶದಲ್ಲಿ 1 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 900 ವಿದ್ಯಾರ್ಥಿಗಳಿಗೆ ಮಾತ್ರ ತಿಂಗಳಿಗೆ ₹5 ಸಾವಿರದವರೆಗೆ ಫೆಲೋಷಿಪ್‌ ಬರುತ್ತದೆ.

ನಗರದ ರಾಜಾಜಿನಗರದಲ್ಲಿರುವ ಜ್ಞಾನಧಾರ ಎಜುಕೇಷನಲ್‌ ಸರ್ವಿಸಸ್‌ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಯನ್ನು ಪಡೆದು ಮಯಾಂಕ್ ಈ ಪರೀಕ್ಷೆ ಬರೆದಿದ್ದಾರೆ.

‘ಮಯಾಂಕ್‌ಗೆ ಐಐಎಸ್‌ಸಿ ಅಥವಾ ಯಾವುದು ಐಐಟಿಯಲ್ಲಿ ಸೀಟು ಸಿಗುವ ಸಾಧ್ಯತೆ ಇದೆ. ವಿಪರೀತ ಒತ್ತಡ ಮತ್ತು ಸಾಕಷ್ಟು ದುಬಾರಿಯಾಗಿರುವ ಈ ಶಿಕ್ಷಣ ವ್ಯವಸ್ಥೆಯಲ್ಲಿ ಓಪನಿಂಗ್‌ ಸ್ಕೂಲಿಂಗ್ ಹೆಚ್ಚು ಪ್ರಸ್ತುತವಾಗುತ್ತಿದೆ’ ಎಂದು ಜ್ಞಾನಧಾರ ಎಜುಕೇಷನಲ್‌ ಸರ್ವಿಸಸ್‌ ಸಂಸ್ಥೆಯ ನಿರ್ದೇಶಕ ಡಾ.ಎಂ.ಕೆ. ರಾಘವೇಂದ್ರ ಹೇಳಿದರು.

‘ಎಸ್ಸೆಸ್ಸೆಲ್ಸಿ ನಂತರ ಮಯಾಂಕ್ ಓಪನ್ ಸ್ಕೂಲಿಂಗ್ ಆಯ್ಕೆ ಮಾಡಿಕೊಂಡಿದ್ದಾನೆ. ಯಾವ ವಯಸ್ಸಿನವರು ಬೇಕಾದರೂ, ಯಾವ ಮಾಧ್ಯಮದಲ್ಲಿದ್ದವರೂ ಈ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳಬಹುದು.’ ಎಂದು ಅವರು ಮಾಹಿತಿ ನೀಡಿದರು.

ಮಾಹಿತಿಗೆ, 99011 11008.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT