ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿ ವಸ್ತುಪ್ರದರ್ಶನ

Last Updated 10 ಫೆಬ್ರುವರಿ 2018, 20:09 IST
ಅಕ್ಷರ ಗಾತ್ರ

ಬೆಂಗಳೂರು: ಟೊಮೆಟೊದಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ಮೌಲ್ಯ ವರ್ಧಿತ ಉತ್ಪನ್ನಗಳನ್ನು ತಯಾರಿಸುವುದು ಹೇಗೆ?  ಬೆಂಗಳೂರಿ ನಲ್ಲಿ ಒಣ ಕಸ ನಿರ್ವಹಣೆಗೆ ಸುಲಭೋಪಾಯಗಳೇನು...

ಪೀಣ್ಯದ ರಾಮಯ್ಯ ವಿಶ್ವವಿದ್ಯಾಲಯದ ಆನ್ವಯಿಕ ವಿಜ್ಞಾನ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳ ವಾರ್ಷಿಕ ವಿಜ್ಞಾನ ಮಾದರಿ ವಸ್ತುಪ್ರದರ್ಶನದಲ್ಲಿ ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಗಳಿದ್ದವು.

ಶುಕ್ರವಾರ ನಡೆದ ಈ ಪ್ರದರ್ಶನದಲ್ಲಿ ಎಂಜಿನಿಯರಿಂಗ್‌, ದಂತವೈದ್ಯ, ಫಾರ್ಮಸಿ, ವಾಣಿಜ್ಯ ವಿಷಯಗಳ ಕುರಿತು 500 ವಿದ್ಯಾರ್ಥಿಗಳು 100ಕ್ಕೂ ಅಧಿಕ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು.

ವಿದ್ಯಾರ್ಥಿಗಳಿಗೆ ಮಾದರಿಗಳನ್ನು ಪ್ರದರ್ಶಿಸಲು ರೂಸಾ ಸಂಸ್ಥೆ ವೇದಿಕೆ ಕಲ್ಪಿಸಿತ್ತು.‌ ಎಫ್‌ಎಚ್‌ಎಂಸಿಟಿ ವಿಭಾಗದವರು ಟೊಮೆಟೊ ಮೌಲ್ಯವರ್ಧನೆ ವಿಧಾನಗಳನ್ನು ಪರಿಚಯಿಸಿದರು. ನಿರ್ವಹಣೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅಂಗವಿಕಲ ಮಕ್ಕಳಿಗೆ ಮೌಖಿಕ ಶಿಕ್ಷಣ ಒದಗಿಸುವುದನ್ನು ತೋರಿಸಿ ಕೊಟ್ಟರು.

ಮಡಚಿಕೊಂಡು ಹೋಗಬಹುದಾದ ಎಲೆಕ್ಟ್ರಿಕ್‌ ಬೈಕ್‌, ಹೋವರ್‌ ಬೈಕ್, ಎಲೆಕ್ಟ್ರಿಕ್‌ ವಾಹನ, ಇಂಧನ ದಕ್ಷ ಬಳಕೆ ಕಟ್ಟಡದ ಮಾದರಿಗಳೂ ಪ್ರದರ್ಶನದಲ್ಲಿದ್ದವು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜನರಲ್ ಮೋಟಾರ್ ಇಂಡಿಯಾದ ಮುಖ್ಯಸ್ಥ ಇಲಿಯಟ್‌ ದೇವಸಗಯಮ್‌, ‘ವಾಹನ ಉದ್ಯಮ ಇಂದು ವೇಗವಾಗಿ ಬೆಳೆಯುತ್ತಿದೆ. 50 ವರ್ಷಗಳಲ್ಲಿ ಏನೆಲ್ಲ ಬೆಳವಣಿಗೆಗಳಾದವೋ, ಅದಕ್ಕಿಂತ ಹೆಚ್ಚಿನ ಪ್ರಗತಿಇನ್ನು ಐದು ವರ್ಷಗಳಲ್ಲಿ ಆಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT