ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿಗೆ ಕಿರಿಯ ಕವಯಿತ್ರಿ ಗರಿ

Last Updated 20 ಆಗಸ್ಟ್ 2021, 2:03 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬಿಷಪ್‌ ಕಾಟನ್‌ ಬಾಲಕಿಯರ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಅಮಾನಾ ಅತಿ ಕಿರಿಯ ಕವಯಿತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌’ ಮತ್ತು ’ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌’ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಅಮಾನಾ ಬರೆದಿದ್ದ 61 ಕವನಗಳ ಪುಸ್ತಕವನ್ನು 2020ರ ನವೆಂಬರ್‌ನಲ್ಲಿ ಸಪ್ನಾ ಬುಕ್‌ಹೌಸ್ ಪ್ರಕಟಿಸಿತ್ತು. ಆಗ, ಅಮಾನಾಗೆ 12 ವರ್ಷ, 5 ತಿಂಗಳು ಮತ್ತು 10 ದಿನಗಳಾಗಿತ್ತು. ಈ ಕೃತಿಯನ್ನು ಪರಿಗಣಿಸಿ, ಅತಿಕಿರಿಯ ಕವಯಿತ್ರಿ ಎಂಬ ಗರಿಮೆಯನ್ನು ಅಮಾನಾಗೆ ನೀಡಲಾಗಿದೆ.

ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಈವರೆಗೆ 275 ಕವನಗಳನ್ನು ವಿದ್ಯಾರ್ಥಿನಿ ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT