ಪಶ್ಚಿಮ ಬಂಗಾಳದ ಯುವತಿ ಆತ್ಮಹತ್ಯೆ

7

ಪಶ್ಚಿಮ ಬಂಗಾಳದ ಯುವತಿ ಆತ್ಮಹತ್ಯೆ

Published:
Updated:

ಬೆಂಗಳೂರು: ಪಶ್ಚಿಮ ಬಂಗಾಳದ ಲಕ್ಷ್ಮಿ (25) ಎಂಬುವರು ವರ್ತೂರು ಕೆರೆ ಸಮೀಪದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಅವರು, ವೈಟ್‌ಫೀಲ್ಡ್‌ನ ಸೇಂಟ್ ತೆರೆಸಾಯಿ ತರಬೇತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಕೆಲಸ ಇರುವುದಾಗಿ ಹೇಳಿ ಗುರುವಾರ ಮಧ್ಯಾಹ್ನ 2.30ಕ್ಕೆ ಹೊರಗೆ ಹೋದವರು ರಾತ್ರಿಯಾದರೂ ಕೇಂದ್ರಕ್ಕೆ ವಾಪಸಾಗಿರಲಿಲ್ಲ. ಹೀಗಾಗಿ, ಅವರು ಕಾಣೆಯಾಗಿರುವುದಾಗಿ ಸೋಫಿಯಾ ಎಂಬುವರು ವೈಟ್‌ಫೀಲ್ಡ್ ಠಾಣೆಗೆ ದೂರು ಕೊಟ್ಟಿದ್ದರು.

‘ಶುಕ್ರವಾರ ಸಂಜೆ ಯುವತಿಯ ಶವ ನೋಡಿದ ದಾರಿಹೋಕರು, ಠಾಣೆಗೆ ಕರೆಮಾಡಿ ವಿಷಯ ತಿಳಿಸಿದರು. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಸದ್ಯ ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮೃತರ ಪೋಷಕರಿಗೆ ವಿಷಯ ತಿಳಿಸಲಾಗಿದ್ದು, ಅವರು ಭಾನುವಾರ ನಗರಕ್ಕೆ ಬರಲಿದ್ದಾರೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 4

  Sad
 • 0

  Frustrated
 • 1

  Angry

Comments:

0 comments

Write the first review for this !