ಮಹಿಳೆ ಆತ್ಮಹತ್ಯೆ; ಪತಿ ವಶಕ್ಕೆ

7

ಮಹಿಳೆ ಆತ್ಮಹತ್ಯೆ; ಪತಿ ವಶಕ್ಕೆ

Published:
Updated:

ಬೆಂಗಳೂರು: ಅಮೃತಹಳ್ಳಿ ಸಮೀಪದ ಕೆಂಪಾಪುರದಲ್ಲಿ ಮಂಗಳವಾರ ರಾತ್ರಿ ನವ್ಯಾ (28) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ವರದಕ್ಷಿಣೆ ತರುವಂತೆ ಅಳಿಯ ಕಿರುಕುಳ ನೀಡುತ್ತಿದ್ದ. ಆ ಹಿಂಸೆ ತಾಳಲಾರದೆ ನವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಆರೋಪಿಸಿ ಮೃತಳ ತಂದೆ ನಾರಾಯಣಸ್ವಾಮಿ ದೂರು ಕೊಟ್ಟಿದ್ದಾರೆ. ಅದರನ್ವಯ ಪೊಲೀಸರು ಪತಿ ರಮೇಶ್ ಬಾಬು ಅವರನ್ನು ವಶಕ್ಕೆ ಪಡೆದಿದ್ದಾರೆ. ‌

ಚಿಂತಾಮಣಿಯ ರಮೇಶ್, ನಗರದ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿದ್ದಾರೆ. ಹತ್ತು ವರ್ಷಗಳ ಹಿಂದೆ ನವ್ಯಾ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 

ಮಂಗಳವಾರ ರಾತ್ರಿ ನವ್ಯಾ ಕೋಣೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಮಕ್ಕಳೊಂದಿಗೆ ಹೊರೆಗೆ ಹೋಗಿದ್ದ ಪತಿ, 10 ಗಂಟೆ ಸುಮಾರಿಗೆ ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !