ನನಗಲ್ಲ, ಇಡೀ ದೇಶಕ್ಕೆ ಅಜ್ಜ: ಗಾಂಧಿ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ

6

ನನಗಲ್ಲ, ಇಡೀ ದೇಶಕ್ಕೆ ಅಜ್ಜ: ಗಾಂಧಿ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ

Published:
Updated:
Deccan Herald

ಬೆಂಗಳೂರು: ‘ಬಾಪೂಜಿ ನನ್ನ ಕುಟುಂಬಕ್ಕೆ ಸೇರಿದವರೇ ಇರಬಹುದು. ಆದರೆ, ಅವರು ನನಗೆ ಮಾತ್ರ ಅಜ್ಜನಲ್ಲ; ಇಡೀ ದೇಶಕ್ಕೆ ಅಜ್ಜ...’

– ಗಾಂಧೀಜಿ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಅವರ ಸ್ಪಷ್ಟ ಅಭಿಪ್ರಾಯವಿದು. ಪ್ರೆಸ್‌ಕ್ಲಬ್‌ ಆವರಣದಲ್ಲಿ ಸಸಿ ನೆಟ್ಟು, ಬಾಪೂಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

‘ರಾಹುಲ್‌ ಗಾಂಧಿ ಹೋದಲ್ಲೆಲ್ಲ ಗಾಂಧೀಜಿ ಹೆಸರನ್ನು ಬಳಸುತ್ತಿದ್ದಾರೇಕೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಗಾಂಧೀಜಿ ದೇಶಬಂಧು. ಅವರ ಹೆಸರನ್ನು ಯಾರೂ ಬಳಸಬಹುದು’ ಎಂದು ಹೇಳಿದರು.

‘ಗಾಂಧಿಯನ್ನು ಪೂಜಿಸುವುದು, ಅನುಕರಣೆ ಮಾಡುವುದು ಅವರವರ ಇಷ್ಟಕ್ಕೆ ಸಂಬಂಧಿಸಿದ್ದು. ನಾನು ನೀವು ಹೇಳಿದರೆ ಪೂಜಿಸಬೇಕೆಂದೇನೂ ಇಲ್ಲ’ ಎಂದು ಅಭಿಪ್ರಾಯಪಟ್ಟರು.

‘ಗಾಂಧೀಜಿಯ ತತ್ವಾದರ್ಶಗಳು ಅಂದಿನ ಕಾಲಕ್ಕೆ ತಕ್ಕಂತೆ ಇದ್ದವು. ಕಾಲಕ್ಕೆ ತಕ್ಕಂತೆ ಜನತೆಯ ಯೋಚನಾಶಕ್ತಿ ಬೆಳೆಯುತ್ತಿದೆ. ಬದಲಾವಣೆಯೂ ಆಗುತ್ತಿರುತ್ತದೆ’ ಎಂದು ಅವರು ಹೇಳಿದರು.

ನೆರೆದಿದ್ದ ಮಾಧ್ಯಮ ಸಮೂಹಕ್ಕೆ ಸ್ವತಃ ಸಿಹಿ ಹಂಚಿದರು. 

ಬರಹ ಇಷ್ಟವಾಯಿತೆ?

 • 9

  Happy
 • 3

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !