ಶುಕ್ರವಾರ, ನವೆಂಬರ್ 22, 2019
26 °C
ಮರ್ಸಿಡಿಸ್ ಬೆಂಝ್‌ ತಾಂತ್ರಿಕ ತಜ್ಞರೊಂದಿಗೆ ಸಂವಹನ ಅವಕಾಶ

ಐಷಾರಾಮಿ ಕಾರುಗಳ ಸೇವಾ ಕೇಂದ್ರ ಆರಂಭ

Published:
Updated:
Prajavani

ಬೆಂಗಳೂರು: ಮರ್ಸಿಡಿಸ್ ಬೆಂಝ್ ಇಂಡಿಯಾ ಮತ್ತು ಸುಂದರಂ ಮೋಟರ್ಸ್‌ ನಗರದ ಕಸ್ತೂರ ಬಾ ರಸ್ತೆಯಲ್ಲಿ ಸೇವಾ ಕೇಂದ್ರ ಪ್ರಾರಂಭಿಸಿದ್ದು, ಈ ಕೇಂದ್ರದಲ್ಲಿ ಐಷಾರಾಮಿ ಕಾರಿನ ಮಾಲೀಕರಿಗೆ ಮರ್ಸಿಡಿಸ್ ಬೆಂಝ್‌ನ ತಾಂತ್ರಿಕ ತಜ್ಞರೊಂದಿಗೆ ಸಂವಹನ ನಡೆಸುವ ಅವಕಾಶ ಕಲ್ಪಿಸಲಾಗಿದೆ. 

ಸೇವಾ ಕೇಂದ್ರ ಶುಕ್ರವಾರದವರೆಗೆ (ಅ.18) ಕಾರ್ಯನಿರ್ವಹಿಸಲಿದೆ. ‘ಗ್ರಾಹಕರಿಗೆ ಗುಣಮಟ್ಟದ ಸೇವೆ ದೊರೆಯಬೇಕೆಂಬ ಉದ್ದೇಶ
ದಿಂದ ಸೇವಾ ಕೇಂದ್ರ ಪ್ರಾರಂಭಿಸಲಾಗಿದೆ. ಐಷಾರಾಮಿ ಕಾರುಗಳ ಮಾರಾಟದಲ್ಲಿ ಮೈಲುಗಲ್ಲು ಸ್ಥಾಪಿಸಲಾಗಿದ್ದು, ಪ್ರತಿ ಗ್ರಾಹಕ ಕೂಡ ಸೇವೆಯಿಂದ ತೃಪ್ತಿ ಹೊಂದಬೇಕು. ಈ ನಿಟ್ಟಿನಲ್ಲಿ ಸೇವಾ ಕೇಂದ್ರ ಪ್ರಾರಂಭಿಸಲಾಗಿದ್ದು, ಮರ್ಸಿಡಿಸ್ ಬೆಂಝ್‌ನ ತಂತ್ರಜ್ಞರು ಕಾರನ್ನು ಪರಿಶೀಲಿಸಿ, ಅಗತ್ಯ ಸಲಹೆ ನೀಡಲಿದ್ದಾರೆ. ಅಷ್ಟೇ ಅಲ್ಲ, ಕಾರಿನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಅದಕ್ಕೆ ಪರಿಹಾರ ಒದಗಿಸಲಿದ್ದಾರೆ’ ಎಂದು ಸುಂದರಂ ಮೋಟರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶರತ್ ವಿಜಯರಾಘವನ್ ತಿಳಿಸಿದರು. 

ಸುಂದರಂ ಮೋಟರ್ಸ್‌ ರಾಜ್ಯದಲ್ಲಿ ನಡೆಸುತ್ತಿರುವ ಮೂರನೇ ಸೇವಾ ಕೇಂದ್ರ ಇದಾಗಿದೆ. ಸೇವಾ ಕೇಂದ್ರವು ಗ್ರಾಹಕರೊಂದಿಗಿನ ಒಡನಾಟ ವೃದ್ಧಿಸಲು ಸಹಾಯಕವಾಗಿದೆ.

ಇದೇ ಮೊದಲ ಬಾರಿಗೆ ಗ್ರಾಹಕರು ಮರ್ಸಿಡಿಸ್ ಬೆಂಝ್‌ನ ತಂತ್ರಜ್ಞರೊಂದಿಗೆ ಸಂವಹನ ನಡೆಸುವ ಅವಕಾಶ ಕಲ್ಪಿಸಲಾಗಿದೆ. 2018ರಲ್ಲಿ ಮಾರಾಟ ತೃಪ್ತಿ ಹಾಗೂ ಗ್ರಾಹಕರ ತೃಪ್ತಿ ಸೂಚ್ಯಂಕದಲ್ಲಿ ಮರ್ಸಿಡಿಸ್ ಬೆಂಝ್‌ ಮುಂಚೂಣಿಯಲ್ಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 

ವಿವರಕ್ಕೆ ಮೊ. 7259552483ಕ್ಕೆ ಸಂಪರ್ಕಿಸಿ.

ಪ್ರತಿಕ್ರಿಯಿಸಿ (+)