ಗುರುವಾರ , ಅಕ್ಟೋಬರ್ 29, 2020
20 °C

ಸುಂಕದಕಟ್ಟೆ: ಗುಂಡಿಮಯ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಮಾಗಡಿ ರಸ್ತೆಯ ಸುಂಕದಕಟ್ಟೆಯವರೆಗೆ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಮೋಹನ್‍ಚಿತ್ರ ಮಂದಿರ ರಸ್ತೆ, ಲಕ್ಷ್ಮಣನಗರದ 9ನೇ ಮುಖ್ಯರಸ್ತೆ ಮತ್ತು ಎಲ್ಲ ಅಡ್ಡರಸ್ತೆಗಳಲ್ಲಿ ಈ ಸಮಸ್ಯೆಯಿದೆ. ಜೊತೆಗೆ ರಸ್ತೆಗಳು ಅಲ್ಲಲ್ಲಿ ಗುಂಡಿಬಿದ್ದಿವೆ. ಪಾದಚಾರಿ ಮಾರ್ಗದ ಸ್ಲಾಬ್‍ಗಳು ಕಿತ್ತುಹೋಗಿವೆ.

ರಸ್ತೆಗಳನ್ನು ಅಲ್ಲಲ್ಲಿ ವಿವಿಧ ಕಾಮಗಾರಿಗಳಿಗಾಗಿ ಅಗೆದುಹಾಕಲಾಗಿದೆ. ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಸುತ್ತಮುತ್ತಲಿನ ನಿವಾಸಿಗಳಾದ ಗಾರ್ಮೆಂಟ್‌ ಕಾರ್ಮಿಕರು ಅಳಲು ತೋಡಿಕೊಂಡರು.

ಖಾಲಿ ನಿವೇಶನಗಳಲ್ಲಿ ಪ್ಲಾಸ್ಟಿಕ್ ಕಸವನ್ನು ತಂದು ಎಸೆಯಲಾಗುತ್ತಿದೆ. ಮಳೆ ಬಂದಾಗ ದುರ್ವಾಸನೆಯಿಂದ ಅಕ್ಕಪಕ್ಕದ ಮನೆಗಳ ನಿವಾಸಿಗಳು ಕೆಟ್ಟಗಾಳಿ ಸೇವಿಸಬೇಕಾಗಿದೆ. ಪ್ಲಾಸ್ಟಿಕ್ ಕವರ್‌ಗಳನ್ನು ನಿಷೇಧಿಸಬೇಕು ಎಂದು ನಟರಾಜ್ ಒತ್ತಾಯಿಸಿದರು. ವಿಧಾಸಭಾ ಚುನಾವಣೆ ವೇಳೆ ಎಚ್.ಡಿ.ಕುಮಾರಸ್ವಾಮಿ ನಾನು ಮುಖ್ಯಮಂತ್ರಿಯಾದರೆ ಈ ಭಾಗದ ಎಲ್ಲಾ ರಸ್ತೆ, ಚರಂಡಿ ವ್ಯವಸ್ಥೆಯನ್ನು ಒಂದು ತಿಂಗಳೊಳಗಾಗಿ ಸರಿಪಡಿಸುತ್ತೇನೆ ಎಂದಿದ್ದರು. ಅವರು ಮುಖ್ಯಮಂತ್ರಿಯಾದರೂ ನಮ್ಮ ಸಮಸ್ಯೆ ಇದುವರೆಗೆ ಬಗೆ ಹರಿದಿಲ್ಲ ಎಂದು ಮಹಿಳೆಯರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು