ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂಪರ್‌ ದಂಪತಿ’ 29ರಿಂದ

Last Updated 23 ಜುಲೈ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ಕಲರ್ಸ್‌ ಸೂಪರ್‌ ಚಾನೆಲ್‌ನಲ್ಲಿ ಇದೇ 29ರಿಂದ ಸಂಜೆ 6ಕ್ಕೆ ‘ಸೂಪರ್‌ ದಂಪತಿ’ ಕಾರ್ಯಕ್ರಮ ಪ್ರಸಾರವಾಗಲಿದೆ. ವಾರದ ಆರು ದಿನ ಪ್ರಸಾರವಾಗಲಿರುವ ಈ ಕಾರ್ಯಕ್ರಮವನ್ನು ಮುರಳಿ ನಡೆಸಿಕೊಡಲಿದ್ದಾರೆ.

ಸಾಮಾನ್ಯವಾಗಿ ಈ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಬೆಂಗಳೂರಿಗೆ ಬರಬೇಕಾಗುತ್ತದೆ. ಆದರೆ ‘ಸೂಪರ್ ದಂಪತಿ’ಯಲ್ಲಿ ಅವರ ಮನೆಯ ಬಳಿಯೇ ಸ್ಪರ್ಧಿಸಬಹುದು. ಇದಕ್ಕಾಗಿಯೇ ಲಾರಿಯೊಂದು ಸಿದ್ಧವಾಗಿದ್ದು, ಇದರಲ್ಲಿ ವಿಶೇಷವಾದ ವೇದಿಕೆ ನಿರ್ಮಿಸಲಾಗಿದೆ. ರಾಜ್ಯದ ನೂರಾರು ಊರುಗಳಿಗೆ ಈ ಲಾರಿ ಹೋಗಲಿದೆ. ದಂಪತಿಯನ್ನು ಆಟವಾಡಿಸಿ, ಮಾತನಾಡಿಸಿ ಅವರಿಗೆ ಬಹುಮಾನ ನೀಡಲಾಗುತ್ತದೆ.

ಈಗಾಗಲೇ ತುಮಕೂರು, ಸಿರಾ, ಚಳ್ಳಕೆರೆ, ಹಿರಿಯೂರು, ಚಿತ್ರದುರ್ಗ ಮತ್ತು ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆದಿದೆ. ಮುಂದಿನ ಹಂತವಾಗಿ ಜಗಳೂರು, ಹರಿಹರ, ದಾವಣಗೆರೆ, ರಾಣೆಬೆನ್ನೂರು, ಬ್ಯಾಡಗಿಯಲ್ಲಿ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮ ನಡೆಯುವ ಊರುಗಳಲ್ಲಿ ಒಂದು ವಾರ ಮೊದಲೇ ಆಡಿಷನ್ ನಡೆಯುತ್ತದೆ. ಆಯ್ಕೆಯಾದವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ವೂಟ್ ಮೂಲಕವೂ ದಂಪತಿ ಅರ್ಜಿ ಸಲ್ಲಿಸಬಹುದು.ಗೆಲ್ಲುವ ದಂಪತಿಗೆ ಚಿನ್ನದ ಮಾಂಗಲ್ಯವನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ವಾಹಿನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT