ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೆ ಅಂತ ಪ್ರಶ್ನೆ | ಟ್ವಿಟರ್‌ನಲ್ಲಿ ಹರಿದಾಡ್ತಿದೆ ದೇವರೆ ಬುದ್ಧಿಕೊಡು ಟ್ವೀಟ್

Last Updated 24 ಅಕ್ಟೋಬರ್ 2019, 3:11 IST
ಅಕ್ಷರ ಗಾತ್ರ

ಶಿಕ್ಷಣ ಸಚಿವಸುರೇಶ್‌ಕುಮಾರ್‌ ಅವರ‘ಓ ದೇವರೇ’ ಟ್ವೀಟ್‌ ಇದೀಗ ಟ್ವಿಟರ್‌ನಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ.ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸದೇ ಟ್ವಿಟರ್‌ನಲ್ಲಿ ಸುರೇಶ್‌ಕುಮಾರ್‌ ಕುಟುಕಿದ್ದರು.

‘ಓ ದೇವರೇ! ರಾಜ್ಯದ ಪ್ರತಿಪಕ್ಷದ ನಾಯಕರು ವಿಧಾನಸಭೆಯ ಅಧಿವೇಶನದ ಸಮಯದಲ್ಲಿ ಸದನದಲ್ಲಿಯಾದರೂ ಮಾನ್ಯ ಸಭಾಧ್ಯಕ್ಷರನ್ನು ಏಕವಚನದಲ್ಲಿ ಸಂಬೋಧಿಸದಂತೆ ಬುದ್ದಿ ಕೊಡು’ ಎನ್ನುವುದು ಸುರೇಶ್‌ಕುಮಾರ್‌ ಅವರ ಟ್ವೀಟ್‌ ಪ್ರಾರ್ಥನೆ.

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಸಂದರ್ಭ ಸಿದ್ದರಾಮಯ್ಯ,‘ಅವನ್ಯಾರೊ ಒಬ್ಬ ಪುಣ್ಯಾತ್ಮನ ಸ್ಪೀಕರ್ ಮಾಡಿಬಿಟ್ಟಿದ್ದಾರೆ. ಅವನು ಹೊಸಬ ಏನೂ ಗೊತ್ತಿಲ್ಲ’ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದರು.

ಸುರೇಶ್‌ಕುಮಾರ್ ಅವರು ತಮ್ಮ ಟ್ವೀಟ್‌ನಲ್ಲಿ ಈ ಪ್ರಸಂಗವನ್ನಾಗಲೀ, ಸಿದ್ದರಾಮಯ್ಯ ಅವರ ಹೆಸರನ್ನಾಗಲೀ ಪ್ರಸ್ತಾಪಿಸದೇ, ಸ್ಪೀಕರ್‌ ಕುರಿತು ಏಕವಚನದಲ್ಲಿ ಮಾತನಾಡಿರುವದನ್ನುಆಕ್ಷೇಪಿಸಿದ್ದಾರೆ.

ಇವರಿಗೂ ಬುದ್ಧಿಕೊಡು ಎಂದ ಜನರು

ಸಚಿವರ ಟ್ವೀಟ್‌ ಗಮನಿಸಿದ ಜನರು, ಶಿಕ್ಷಣ ಇಲಾಖೆಯಲ್ಲಿ ಆಗಬೇಕಿರುವ ಕೆಲಸಗಳು ಮತ್ತು ಪ್ರವಾಹ ಪರಿಹಾರದ ಕಾರ್ಯಗಳನ್ನು ಪ್ರಸ್ತಾಪಿಸಿ ಸರ್ಕಾರಕ್ಕೆ ಮತ್ತು ಸಚಿವರಿಗೆ ಸಲಹೆಗಳನ್ನು ನೀಡಿದ್ದಾರೆ, ಲೋಪದೋಷಗಳನ್ನು ಎತ್ತಿತೋರಿಸಿದ್ದಾರೆ.

‘ಓ ದೇವರೇ ನಮ್ಮ ರಾಜಕಾರಣಿಗಳು ಕೇಂದ್ರದ ಮೇಲೆ ಒತ್ತಡ ಹಾಕಿ ಹೆಚ್ಚಿನ ನೆರೆಪರಿಹಾರ ತಂದು ಕೊಡುವಂತೆ ಬುದ್ದಿ ಕೊಡು. ನೆರೆ ಸಮಯದಲ್ಲಿ ರಾಜಕೀಯ ಮಾಡದಂತೆ ಮನಸು ಕೊಡು’ ಎಂದು ಕನ್ನಡದ ಕಂದ ಉಪೇಂದ್ರ ಟ್ವಿಟರ್ಅಕೌಂಟ್‌ ಪ್ರಶ್ನಿಸಿದೆ.

‘ಓ ದೇವರೇ, ವಸತಿ ಶಾಲೆ ಶಿಕ್ಷಕರ ನೇಮಕಾತಿಯನ್ನು ಮೂರು ವರ್ಷಗಳ ಕಾಲ ಸಮಯ ತೆಗೆದುಕೊಳ್ಳುತ್ತಿದ್ದಾರೆ, ಸಂಬಂಧಪಟ್ಟ ಸಚಿವರಿಗೆ, ವಿರೋಧ ಪಕ್ಷದವರಿಗೆ ಅದರ ಬಗ್ಗೆ ಸದನದಲ್ಲಿ ಹೇಳುವುದಕ್ಕೆ ಬುದ್ಧಿ ಕೊಡು’ ಎಂದು ರಮೇಶ್‌ ಕುಮಾರ್‌ ಪ್ರಾರ್ಥಿಸಿದ್ದಾರೆ.

ಮುನಿನರಸಿಂಹಯ್ಯ ಅವರದು ‘ಪ್ರಧಾನಿಗೆ ಬುದ್ಧಿಕೊಡು ದೇವರೇ’ ಎನ್ನುವ ಪ್ರಾರ್ಥನೆ.

‘ಓ ದೇವರೆ, ಈ ಬಾರಿಯಾದರೂ ನಮ್ಮ ದೇಶದ ಪ್ರಧಾನ ಸೇವಕರಿಗೆ ವಿದೇಶಿದಲ್ಲಿರುವ ಸಿರಿವಂತ NRI ಗಳ ಮಧ್ಯೆ ರಾಜ್ಯದ ನೆರೆ ಪೀಡಿತರು ಕಾಣುವಂತೆ ಮಾಡು.‌ ಈ ಬಾರಿಯಾದರೂ ನೆರೆಪೀಡಿತರಿಗೆ ದಯೆ ತೋರಿಸು’ ಎಂದು ಅವರು ಸುರೇಶ್‌ಕುಮಾರ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಸುರೇಶ್‌ಕುಮಾರ್ ಅವರ ಟ್ವೀಟ್‌ ಅವಿನಾಶ್‌ ಅವರಿಗೆ ಕಳೆದ ಅವಧಿಯ ಬಿಜೆಪಿ ಸರ್ಕಾರದ ಸೆಕ್ಸ್‌ ವಿಡಿಯೊ ಪ್ರಸಂತ ನೆನಪಿಗೆ ತಂದುಕೊಟ್ಟಿದೆ.

‘ಓ ಶ್ರೀ ರಾಮನೇ!ರಾಜ್ಯದಲ್ಲಿ ಆಡಳಿತವಿದೆ ಅಂತ ಅವರು ಎಷ್ಟೆ ಬಂಡಗೆಟ್ಟರು ಈ ಬಾರಿಯಾದರೂ ಸದನದಲ್ಲಿ ಸೆಕ್ಸ್ ವಿಡಿಯೋ ನೋಡದಂತೆಹಾಗೂ ಬಟ್ಟೆಗಳನ್ನ ಬೀದಿ ರೌಡಿಗಳಂತೆಸದನದಲ್ಲಿ ಹರಿದುಕೊಂಡು ಕಿರುಚಾಡದಂತೆಸ್ವಲ್ಪ ಬುದ್ದಿ ಕೊಡಪ್ಪ!’ ಎಂದು ಪ್ರಾರ್ಥಿಸಿದ್ದಾರೆ.

‘ಟಿವಿ ಕ್ಯಾಮೆರಾಗಳನ್ನು ಒಳಗೆ ಬಿಟ್ಟಿದ್ದರೆ ಯಾರು ಹೇಗೆ ಅಂತ ಗೊತ್ತಾಗ್ತಿತ್ತು. ಈಗ ಸಮಸ್ಯೆ ನಿಮ್ಮ ಬುಡಕ್ಕೇ ಬಂದಿದೆ. ಇನ್ನಾದರೂ ಟಿವಿ ಕ್ಯಾಮೆರಾಗಳನ್ನು ವಿಧಾನಸಭೆಗೆ ಬಿಡಿ’ ಎನ್ನುವುದು ತರಲೆ ತಿಮ್ಮನ ಪ್ರಾರ್ಥನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT