ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಲಟ್ ಸಾಹಿಲ್‍ಗೆ ಗೌರವ: ಏರೋ ಇಂಡಿಯಾದಲ್ಲಿ ಸೂರ್ಯ ಕಿರಣ್ ವೈಮಾನಿಕ ಪ್ರದರ್ಶನ

Last Updated 23 ಫೆಬ್ರುವರಿ 2019, 7:16 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆಬ್ರುವರಿ 19ರಂದು ವೈಮಾನಿಕ ತಾಲೀಮು ವೇಳೆ ಸೂರ್ಯ ಕಿರಣ್‌ ವಿಮಾನಗಳು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸಾವಿಗೀಡಾಗಿದ್ದ ವಿಂಗ್‌ ಕಮಾಂಡರ್ ಸಾಹಿಲ್‌ ಗಾಂಧಿಗೆ ಗೌರವಸಲ್ಲಿಸಿ ಸೂರ್ಯ ಕಿರಣ್ ತಂಡ ಶನಿವಾರ ವೈಮಾನಿಕ ಪ್ರದರ್ಶನ ನೀಡಿದೆ.

ವಿಮಾನಗಳು ಡಿಕ್ಕಿ ಹೊಡೆದು ಸಂಭವಿಸಿದ ಈ ದುರಂತದ ನಂತರ ಏರೋ ಇಂಡಿಯಾದಲ್ಲಿ ಸೂರ್ಯ ಕಿರಣ್ ತಂಡ ವೈಮಾನಿಕ ಪ್ರದರ್ಶನ ನೀಡುವುದಿಲ್ಲ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಹೇಳಿದ್ದರು. ಆದರೆ ಶನಿವಾರ ಪ್ರದರ್ಶನ ನೀಡುವ ತಂಡಗಳ ಪಟ್ಟಿಯಲ್ಲಿ ಸೂರ್ಯ ಕಿರಣ್ ತಂಡದ ಹೆಸರನ್ನು ಶುಕ್ರವಾರ ಸೇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT