ಸೂರ್ಯ ನಗರದ ಕೆ.ಎಚ್.ಬಿ ಸೂರ್ಯ ಕ್ರೀಡಾ ಗ್ರಾಮದ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಮಾದರಿ.
ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್
ಈ ಕ್ರೀಡಾಂಗಣ ನಿರ್ಮಾಣವಾದ ಬಳಿಕ ಪ್ರವಾಸೋದ್ಯಮ ಸುತ್ತಮುತ್ತಲ ಗ್ರಾಮಗಳಲ್ಲಿ ಆರ್ಥಿಕ ಚಟುವಟಿಕೆಗಳು ಬಲಗೊಳ್ಳುವ ಜೊತೆಗೆ ವಿಪುಲ ಉದ್ಯೋಗ ಸೃಷ್ಟಿಯಾಗಲಿದೆ
ಸಿದ್ದರಾಮಯ್ಯ ಮುಖ್ಯಮಂತ್ರಿ
27 ಕ್ರೀಡೆಗಳ ಕ್ರೀಡಾಂಗಣ
‘ಸೂರ್ಯ ನಗರ ಕ್ರೀಡಾ ಸಂಕೀರ್ಣದಲ್ಲಿ 27 ಕ್ರೀಡೆಗಳ ಕ್ರೀಡಾಂಗಣ ಬರಲಿದ್ದು ₹2000 ಕೋಟಿ ಮೊತ್ತದಲ್ಲಿ ಯೋಜನೆ ಅನುಷ್ಠಾನ ಆಗಲಿದೆ. ಮೆಟ್ರೊ ಸಂಪರ್ಕ ಅಗತ್ಯವಿದ್ದು ರಸ್ತೆ ಅಭಿವೃದ್ಧಿ ಹಾಗೂ ಇತರೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು’ ಎಂದು ಆನೇಕಲ್ ಶಾಸಕ ಬಿ. ಶಿವಣ್ಣ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದರು.