ಗುರುವಾರ , ಡಿಸೆಂಬರ್ 12, 2019
17 °C
ಅತಿಯಾಗಿ ಮಾದಕ ವಸ್ತು ಸೇವನೆ ಕಾರಣ?

ಇಬ್ಬರು ಯುವಕರ ಅನುಮಾನಾಸ್ಪದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯುವಕರಿಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ವೈಯಾಲಿಕಾವಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಕೋದಂಡರಾಮಪುರದ ನಿವಾಸಿಗಳಾದ ಅಭಿಲಾಷ್‌ (23) ಮತ್ತು ಗೋಪಿ (32) ಮೃತಪಟ್ಟವರು.

‘ಮೃತರಿಬ್ಬರೂ ಸ್ನೇಹಿತ ರಾಗಿದ್ದು, ಒಬ್ಬ ಜ್ವರ ಮತ್ತು ವಾಂತಿಭೇದಿಯಿಂದ ಮೃತಪಟ್ಟಿದ್ದಾನೆ. ಮತ್ತೊಬ್ಬ ಹೊಟ್ಟೆನೋವಿಗೆ ಮಾತ್ರೆ ಯೊಂದನ್ನು ಸೇವಿಸಿದ್ದು, ಅದರ ಪರಿಣಾಮದಿಂದ ಸಾವಿಗೀಡಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು. ವೈಯಾಲಿಕಾವಲ್‌ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

‘ಅತಿಯಾದ ಪ್ರಮಾಣದಲ್ಲಿ ಮಾದಕ ವಸ್ತು ಸೇವಿಸಿದ್ದರಿಂದ ಇಬ್ಬರೂ ಮೃತಪಟ್ಟಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕಲು ಯತ್ನ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಪ್ರತಿನಿಧಿ ಸುವ ಕ್ಷೇತ್ರದಲ್ಲೇ ಮಾದಕ ವಸ್ತು ಮಾರಾಟ ಅವ್ಯಾಹತವಾಗಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಸ್ಥಳೀಯರ ಆರೋಪವನ್ನು ಪೊಲೀಸರು ‌ನಿರಾಕರಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು