ಬೆಂಗಳೂರು: ‘ಸ್ವಚ್ಛ ಸರ್ವೇಕ್ಷಣಾ–2026’ ಅಭಿಯಾನದಲ್ಲಿ ಬೆಂಗಳೂರಿಗೆ ಉನ್ನತ ಶ್ರೇಣಿ ಬರಲು ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ (ಬಿಎಸ್ಡಬ್ಲ್ಯುಎಂಲ್) ವತಿಯಿಂದ ‘ಸ್ವಚ್ಛ ಸರ್ವೇಕ್ಷಣಾ–2026’ ಕಾರ್ಯಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಗಣ್ಯರನ್ನು ರಾಯಭಾರಿಗಳಾಗಿ ಅಧಿಕೃತವಾಗಿ ಸೇರ್ಪಡೆಗೊಳಿಸುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ನಗರದಲ್ಲಿ ಉತ್ಪತ್ತಿಯಾಗುವ ಒಟ್ಟು ತ್ಯಾಜ್ಯದ ಶೇ 45–50ರಷ್ಟು ಭಾಗವನ್ನು ಈಗಾಗಲೇ ಮರುಬಳಕೆ ಮಾಡಲಾಗುತ್ತಿದೆ. ಈ ಸಂಬಂಧ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಣಾಮಕಾರಿ ಮಾರ್ಪಾಡುಗಳನ್ನು ತರಲಾಗುವುದು’ ಎಂದು ತಿಳಿಸಿದರು.

ಹಸಿ ತ್ಯಾಜ್ಯವನ್ನು ಮೂಲದಲ್ಲಿಯೇ ಗೊಬ್ಬರವಾಗಿಸುವುದು, ಪ್ಲಾಸ್ಟಿಕ್ ಅನ್ನು ವಿದ್ಯುತ್ ಘಟಕಗಳಿಗೆ ಕಳುಹಿಸುವುದು, ಕಡಿಮೆ ಮೌಲ್ಯದ ಪ್ಲಾಸ್ಟಿಕ್ ಅನ್ನು ಸಿಮೆಂಟ್ ಕಾರ್ಖಾನೆಗಳಿಗೆ ಕಳುಹಿಸುವ ಮೂಲಕ ಇಪಿಆರ್ ಕ್ರೆಡಿಟ್ ಪಡೆಯಲಾಗುತ್ತಿದೆ. ಭೂಭರ್ತಿಗೆ ಹೋಗುವ ಕಾಂಪ್ಯಾಕ್ಟರ್ಗಳ ಸಂಖ್ಯೆ 400ರಿಂದ 260ಕ್ಕೆ ಇಳಿಕೆಯಾಗಿದೆ ಎಂದರು.

‘ನಗರದಾದ್ಯಂತ ತ್ಯಾಜ್ಯದ ಸಮರ್ಪಕ ವಿಂಗಡಣೆ, ತ್ಯಾಜ್ಯ ಸಂಸ್ಕರಣೆ ಹಾಗೂ ಸಾರ್ವಜನಿಕ ಸ್ಥಳಗಳ ನೈರ್ಮಲ್ಯ ಕಾಪಾಡುವಿಕೆಗೆ ಹೆಚ್ಚಿನ ಆದ್ಯತೆ ನೀಡಿ ಕಾರ್ಯನಿರ್ವಹಿಸಲಾಗುತ್ತಿದೆ. ಈ ಬಾರಿಯ ಸ್ವಚ್ಛ ಸರ್ವೇಕ್ಷಣಾದಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಹಾಗೂ ನೇರ ಭಾಗವಹಿಸುವಿಕೆಗೆ ಹೆಚ್ಚು ಒತ್ತು ನೀಡಲಾಗಿದೆ’ ಎಂದು ಬಿಎಸ್ಡಬ್ಲ್ಯುಎಂಎಲ್ನ ಸಿಇಒ ಕರೀಗೌಡ ಹೇಳಿದರು.

ಸ್ವಚ್ಛ ಸರ್ವೇಕ್ಷಣಾ ರಾಯಭಾರಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ಮಂಜಮ್ಮ ಜೋಗತಿ, ಚಲನಚಿತ್ರ ನಟ ಅನಿರುದ್ಧ್ ಜಟ್ಕರ್, ಇಂಡಿಯಾ ರೈಸಿಂಗ್ ಟ್ರಸ್ಟ್ನ ಮುಖ್ಯಸ್ಥರಾದ ಅರುಣ್ ಪೈ, ಸಮಾಜ ಸೇವಕರಾದ ಕೆ.ಎಂ. ನಾಗರಾಜ್, ಲೆಟ್ಸ್ ಬಿ ದಿ ಚೇಂಜ್ ಸಂಸ್ಥೆಯ ಮುಖ್ಯಸ್ಥ ಅನಿರುದ್ಧ್ ದತ್ ಹಾಗೂ ಸಾಮಾಜಿಕ ಕಾರ್ಯಕರ್ತ ಅಭಿಲಾಶ್ ನಾಯರ್ ಅವರನ್ನು ರಾಯಭಾರಿಗಳಾಗಿ ನೇಮಿಸಲಾಯಿತು.

ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ನಾಗರಿಕರು, ಮೇಲ್ವಿಚಾರಕರು ಹಾಗೂ ಪೌರಕಾರ್ಮಿಕರು ಸೇರಿದಂತೆ 10 ಮಂದಿಯನ್ನು ‘ಸ್ವಚ್ಛತಾ ಚಾಂಪಿಯನ್’ ಆಗಿ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.