ಬುಧವಾರ, ಏಪ್ರಿಲ್ 8, 2020
19 °C
ಶಾಲೆಗೆ ಭೇಟಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತಂಡ

ವಿದ್ಯಾರ್ಥಿಗಳಿಗೆ ದಂಡ: ಶಾಲೆ ಮಾನ್ಯತೆ ರದ್ದತಿಗೆ ಒತ್ತಾ‌ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಮಾತನಾಡಿದರೆ ದಂಡ ವಿಧಿಸುವ ಸುತ್ತೋಲೆ ಹೊರಡಿಸಿರುವ ಚನ್ನಸಂದ್ರದ ಎಸ್.ಎಲ್‌.ಎಸ್. ಅಂತರರಾಷ್ಟ್ರೀಯ ಗುರುಕುಲ ಶಾಲೆಯ ಮಾನ್ಯತೆಯನ್ನು ರದ್ದು ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. 

ಪ್ರಾಧಿಕಾರಕ್ಕೆ ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಟಿ.ಎಸ್‌.ನಾಗಾಭರಣ, ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಕಾರ್ಯದರ್ಶಿಗಳನ್ನು ಒಳಗೊಂಡ ನಿಯೋಗ ಶಾಲೆಗೆ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿತು. ಮೊದಲ ಬಾರಿ ಕನ್ನಡ ಮಾತನಾಡಿದರೆ ₹ 50, ಪುನರಾವರ್ತನೆಯಾದರೆ ₹ 100 ದಂಡ ವಿಧಿಸುವುದಾಗಿ ಮಕ್ಕಳ ಪೋಷಕರಿಗೆ ಸೂಚನೆ ಪತ್ರವನ್ನು ಕಳಿಸಿರುವುದು ಸಾಬೀತಾಯಿತು. ಶಾಲೆಯ ಪ್ರಾಂಶುಪಾಲರು ಈ ರೀತಿಯ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದರು. 

‘ಶಾಲೆಯು ಶಿಕ್ಷಣ ಹಕ್ಕು ಕಾಯ್ದೆಯ ಪ್ರಕರಣ 2 ಬಿ, 13, 16, 17, 23 ಮತ್ತು 29ನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಕಂಡುಬಂದಿದೆ. ಶಾಲೆಯ ವಿವರ, ಶುಲ್ಕ, ಪ್ರವೇಶ ವಿಧಾನ ಸೇರಿದಂತೆ ವಿವಿಧ ಮಾಹಿತಿಗಳನ್ನು ನಮೂದಿಸಿಲ್ಲ. ಮಕ್ಕಳು ಕೂಡಾ ಭಯದಲ್ಲಿಯೇ ಕಲಿಯುತ್ತಿದ್ದಾರೆ. ನೆಲದ ಕಾನೂನುಗಳಾದ ಶಿಕ್ಷಣ ಹಕ್ಕು ಕಾಯಿದೆ (2009), ಶಿಕ್ಷಣ ಹಕ್ಕು ನಿಯಮಗಳು (2012), ಕನ್ನಡ ಕಲಿಕಾ ಅಧಿನಿಯಮ 2015 ಮತ್ತು ಕನ್ನಡ ಕಲಿಕಾ ನಿಯಮಗಳು 2017 ನ್ನು ಪೂರ್ಣ ಉಲ್ಲಂಘಿಸಿದೆ’ ಎಂದು ನಾಗಾಭರಣ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು