ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಹಲವಾರು ವಿಷಯಗಳು ಈ ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ಪ್ರಸ್ತಾಪವಾಗಲಿವೆ. ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರಿಗೆ ಉಪಯುಕ್ತವಾಗಿರಲಿದೆ. ‘ದಿ ಲಿವ್ ಲವ್ ಲಾಫ್ ಫೌಂಡೇಷನ್’ ಸ್ಥಾಪಕಿಯಾಗಿರುವ ದೀಪಿಕಾ ಅವರು ಕೋವಿಡ್ ಬಿಕ್ಕಟ್ಟಿನ ಸಂದರ್ಭ ಮತ್ತು ನಂತರದ ದಿನಗಳಲ್ಲಿನ ಒತ್ತಡ, ಖಿನ್ನತೆ, ಆತಂಕಗಳನ್ನು ಎದುರಿಸುವ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಆಸಕ್ತರು https://vdnt.in/MTDP ಅಂತರ್ಜಾಲ ತಾಣದಲ್ಲಿ ನೋಂದಾಯಿಸಿಕೊಳ್ಳಲು ವೇದಾಂತು ಸಿಇಒ ವಂಶಿ ಕೃಷ್ಣಾ ತಿಳಿಸಿದ್ದಾರೆ.