ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಚಿವರ ಸಮ್ಮುಖದಲ್ಲಿ ಬ್ಯಾರಿಕೇಡ್‌ ತೆರವು

ತಮಿಳುನಾಡು ಪೊಲೀಸರ ಅತಿಕ್ರಮ ಪ್ರವೇಶ
Last Updated 10 ಏಪ್ರಿಲ್ 2020, 4:10 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಗಡಿಯೊಳಗೆ ಅತಿಕ್ರಮವಾಗಿ ಪ್ರವೇಶಿಸಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ನೆರೆಯ ತಮಿಳುನಾಡು ಪೊಲೀಸರ ನಡೆಯನ್ನು ಆಕ್ಷೇಪಿಸಿ ಬ್ಯಾರಿಕೇಡ್‌ ತೆರವುಗೊಳಿಸಿದ ಪ್ರಸಂಗ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಗುರುವಾರ ನಡೆದಿದೆ.

ಪೊಲೀಸ್‌ ಕಮಿಷನರ್‌ ಹಾಗೂ ಜಂಟಿ ಪೊಲೀಸ್‌ ಕಮಿಷನರ್‌ ಸ್ಥಳದಲ್ಲಿದ್ದ ತಮಿಳುನಾಡಿನ ಡಿಎಸ್‌ಪಿಗೆ ಮಾತನಾಡಿ ಬ್ಯಾರಿಕೇಡ್‌ಗಳನ್ನು ಅಲ್ಲಿಂದ ತೆರವುಗೊಳಿಸಿದರು.

ರಾಜ್ಯದ ಗಡಿಯೊಳಗೆ ತಮಿಳುನಾಡು ಪೊಲೀಸರು ನುಸುಳಿದ್ದರೂ ಕ್ರಮ ವಹಿಸದೆ ತಟಸ್ಥವಾಗಿದ್ದು ಏಕೆ ಎಂದು ಬೆಂಗಳೂರು ಗ್ರಾಮೀಣ ಎಸ್‌ಪಿ ರವಿ ಚನ್ನಣ್ಣ ಅವರಿಂದ ಸರ್ಕಾರ ವಿವರಣೆ ಕೇಳಿದೆ ಎನ್ನಲಾಗಿದೆ.

ಈ ಕುರಿತ ಗೃಹ ಸಚಿವ ಅವರಾಗಲೀ ಅಥವಾ ರವಿ ಚನ್ನಣ್ಣ ಅವರಾಗಲೀ ಪ್ರತಿಕ್ರಿಯೆಗೆ ಸಿಗಲಿಲ್ಲ.ಲಾಕ್‌ಡೌನ್‌ ಪರಿಶೀಲಿಸಲು ಗುರುವಾರವೂ ಸಚಿವರು ಮಡಿವಾಳ, ಎಲೆಕ್ಟ್ರಾನಿಕ್‌ ಸಿಟಿ, ಸನ್‌ ಸಿಟಿ ಮೂಲಕ ಅತ್ತಿಬೆಲೆವರೆಗೆ ಹೋಗಿದ್ದರು. ಆಗ ತಮಿಳುನಾಡು ಪೊಲೀಸರು ಅತ್ತಿಬೆಲೆ
ಯಲ್ಲಿ ರಾಜ್ಯದ ಗಡಿಯೊಳಗೆ ನುಸುಳಿರುವುದು ಸಚಿವರ ಗಮನಕ್ಕೆ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT